ADVERTISEMENT

ಅಪ್ಸರಾಗೆ ‘ಡಾಲಿ’ ರಾಯಭಾರಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 16:04 IST
Last Updated 4 ಸೆಪ್ಟೆಂಬರ್ 2025, 16:04 IST
<div class="paragraphs"><p>ನಾಯಿ </p></div>

ನಾಯಿ

   

ಬೆಂಗಳೂರು: ಅಪ್ಸರಾ ಪೆನ್ಸಿಲ್‌ ಮಾಲೀಕತ್ವ ಹೊಂದಿರುವ ಹಿಂದೂಸ್ತಾನ್ ಪೆನ್ಸಿಲ್‌, ಬಣ್ಣದ ಪೆನ್ಸಿಲ್‌ ಬಳಸಿ ಚಿತ್ರ ಬಿಡಿಸುವ ‘ಡಾಲಿ’ ಹೆಸರಿನ ನಾಯಿಯನ್ನು ತನ್ನ ರಾಯಭಾರಿಯನ್ನಾಗಿ ನೇಮಕ ಮಾಡಿಕೊಂಡಿದೆ!

ಈ ರೀತಿ ನಾಯಿಯನ್ನು ರಾಯಭಾರಿಯಾಗಿ ನೇಮಕ ಮಾಡಿಕೊಂಡ ಮೊದಲ ಕಂಪನಿ ಇದಾಗಿದೆ. ಅಪ್ಸರಾದ ಹೊಸ ಕನೆಕ್ಟ್ ಬ್ರಷ್ ಪೆನ್‌ಗಳ ಬಿಡುಗಡೆಯೊಂದಿಗೆ ‘ಡಾಲಿ’ ಜೊತೆಗಿನ ಕಂಪನಿಯ ಸಂಬಂಧವು ಶುರುವಾಗಿದೆ. ‘ಡಾಲಿ’ಯು ತನ್ನ ಬಾಯಿಯಲ್ಲಿ ಬ್ರಷ್‌ ಪೆನ್‌ ಇಟ್ಟುಕೊಂಡು ಚಿತ್ರವನ್ನು ಬಿಡಿಸುತ್ತದೆ ಎಂದು ಕಂಪನಿ ಹೇಳಿದೆ.

ADVERTISEMENT

‘ನಮ್ಮ ಉತ್ಪನ್ನಗಳು ಲಕ್ಷಾಂತರ ಮಕ್ಕಳ ಮೊದಲ ಚಿತ್ರಗಳು ಮತ್ತು ಡೂಡಲ್‌ನ ಭಾಗವಾಗಿವೆ. ಡಾಲಿಯೊಂದಿಗೆ ಪಾಲುದಾರಿಕೆ ಹೊಂದುವುದು ಪರಿಪೂರ್ಣ ಜೋಡಿಯಂತೆ ಅನಿಸುತ್ತಿದೆ. ಸೃಜನಶೀಲತೆ ಎಲ್ಲರಿಗೂ ಎಂಬ ನಮ್ಮ ನಂಬಿಕೆಯನ್ನು ಅದು ಸಾಕಾರಗೊಳಿಸುತ್ತದೆ’ ಎಂದು ಹಿಂದೂಸ್ತಾನ್ ಪೆನ್ಸಿಲ್ಸ್‌ನ ಮಾರ್ಕೆಟಿಂಗ್ ಮುಖ್ಯಸ್ಥೆ ಐಶ್ವರ್ಯಾ ಹೇಳಿದ್ದಾರೆ.

‘ಆಟವಾಗಿ ಪ್ರಾರಂಭವಾದದ್ದು, ಡಾಲಿಯ ಸ್ವಯಂ ಅಭಿವ್ಯಕ್ತಿಯ ರೂಪವಾಯಿತು. ನಾಯಿ ಮರಿಯಿಂದ ರಾಯಭಾರಿ ನಾಯಿಯವರೆಗಿನ ಪ್ರಯಾಣವು ನಮ್ಮ ಹೆಮ್ಮೆಯನ್ನು ಹೆಚ್ಚಿಸುತ್ತದೆ’ ಎಂದು ಡಾಲಿಯ ಪೋಷಕರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.