ADVERTISEMENT

ಆರ್ಸೆಲ್ಲರ್‌ ಮಿತ್ತಲ್‌ಗೆ ಆದಿತ್ಯ ಸಿಇಒ

ಪಿಟಿಐ
Published 11 ಫೆಬ್ರುವರಿ 2021, 18:34 IST
Last Updated 11 ಫೆಬ್ರುವರಿ 2021, 18:34 IST
ಆದಿತ್ಯ ಮಿತ್ತಲ್ (ಚಿತ್ರ: ಎಎಫ್‌ಪಿ)
ಆದಿತ್ಯ ಮಿತ್ತಲ್ (ಚಿತ್ರ: ಎಎಫ್‌ಪಿ)   

ನವದೆಹಲಿ/ಲಂಡನ್: ಉಕ್ಕು ತಯಾರಿಕಾ ಕಂಪನಿ ಆರ್ಸೆಲ್ಲರ್‌ಮಿತ್ತಲ್‌, ಆದಿತ್ಯ ಮಿತ್ತಲ್ ಅವರನ್ನು ಹೊಸ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಎಂದು ಘೋಷಿಸಿದೆ.

ಆದಿತ್ಯ ಅವರು ಲಕ್ಷ್ಮಿ ಎನ್‌. ಮಿತ್ತಲ್ ಅವರ ಮಗ. ಆದಿತ್ಯ ಅವರು ಈಗ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿಯ (ಸಿಎಫ್‌ಒ) ಹುದ್ದೆಯಲ್ಲಿದ್ದಾರೆ. ಲಕ್ಷ್ಮಿ ಮಿತ್ತಲ್ ಅವರು ಕಂಪನಿಯ ಹಾಲಿ ಸಿಇಒ. ಮಗ ಆ ಹುದ್ದೆಯನ್ನು ವಹಿಸಿಕೊಂಡ ನಂತರ, ಕಂಪನಿಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಲಕ್ಷ್ಮಿ ಮಿತ್ತಲ್ ಮುಂದುವರಿಯಲಿದ್ದಾರೆ.

ಆರ್ಸೆಲ್ಲರ್‌ಮಿತ್ತಲ್‌ ಜಗತ್ತಿನ ಅತಿದೊಡ್ಡ ಉಕ್ಕು ತಯಾರಿಕಾ ಕಂಪನಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.