ADVERTISEMENT

ಆಸಿಯಾನ್‌ ಶೃಂಗಸಭೆಗೆ 300 ವಿದೇಶಿ ಪ್ರತಿನಿಧಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2019, 17:32 IST
Last Updated 19 ಫೆಬ್ರುವರಿ 2019, 17:32 IST

ಬೆಂಗಳೂರು: ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ (ಎಫ್‌ಕೆಸಿಸಿಐ) ಆಶ್ರಯದಲ್ಲಿ ಇದೇ 25ರಿಂದ ಮೂರು ದಿನಗಳ ಕಾಲ ನಗರದಲ್ಲಿ ನಡೆಯಲಿರುವ ಆಸಿಯಾನ್‌ ವಾಣಿಜ್ಯೋದ್ಯಮ ಶೃಂಗಸಭೆಯಲ್ಲಿ ವಿದೇಶಗಳ 300 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ.

‘ಎಫ್‌ಕೆಸಿಸಿಐ’ ಈ ಬಗೆಯ ಸಮ್ಮೇಳನವನ್ನು ಇದೇ ಮೊದಲ ಬಾರಿಗೆ ಸಂಘಟಿಸುತ್ತಿದೆ. ಅರಬ್‌ ಅಮೀರರ ಒಕ್ಕೂಟದ (ಯುಎಇ) ಉದ್ಯಮಿ ಡಾ. ಬಿ. ಆರ್‌. ಶೆಟ್ಟಿ, ಆಸಿಯಾನ್‌ – ಭಾರತ ಉದ್ದಿಮೆ ಸಲಹಾ ಮಂಡಳಿಯ ಕಾರ್ಯದರ್ಶಿಯಾಗಿರುವ ಕ್ವಾಲಾಲಂಪುರದ ಡಿ. ರಮೇಶ್‌ ಕೊಡಮ್ಮಲ್‌, ಬ್ಯಾಂಕ್‌ ಆಫ್‌ ಬಹ್ರೇನ್‌ ಆ್ಯಂಡ್‌ ಕುವೈತ್‌ನ ಮುಖ್ಯಸ್ಥ ಎಸ್‌ವಿಆರ್‌ ಮೂರ್ತಿ ಮತ್ತಿತರ ದಿಗ್ಗಜರು ತಾವು ಭಾಗವಹಿಸುವುದನ್ನು ಖಚಿತಪಡಿಸಿದ್ದಾರೆ.

‘ಆಸಿಯಾನ್‌ ದೇಶಗಳಲ್ಲಿನ ಭಾರತದ ರಾಯಭಾರಿಗಳು ಒಳಗೊಂಡಂತೆ ವಿಶೇಷ ಆಹ್ವಾನಿತ ದೇಶಗಳಿಗೆ ಸೇರಿದ 300ಕ್ಕೂ
ಹೆಚ್ಚು ನಿಯೋಗಗಳು ಭಾಗವಹಿಸಲಿವೆ’ ಎಂದು ‘ಎಫ್‌ಕೆಸಿಸಿಐ’ ಅಧ್ಯಕ್ಷ ಸುಧಾಕರ್‌ ಶೆಟ್ಟಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.