ADVERTISEMENT

VRL ಕಂಪನಿಗೆ ಅಶೋಕ್ ಲೇಲೆಂಡ್‌ನಿಂದ 1,560 ಟ್ರಕ್‌ಗಳ ನಿರ್ಮಾಣ 

ಪಿಟಿಐ
Published 17 ಏಪ್ರಿಲ್ 2023, 9:08 IST
Last Updated 17 ಏಪ್ರಿಲ್ 2023, 9:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಸಾರಿಗೆ ಕ್ಷೇತ್ರದಲ್ಲಿನ ಜನಪ್ರಿಯ ಕಂಪನಿ ವಿಆರ್‌ಎಲ್‌ಗೆ ಅಶೋಕ್ ಲೇಲೆಂಡ್‌ ಸುಮಾರು 1,560 ಟ್ರಕ್‌ಗಳನ್ನು ತಯಾರಿಸಿಕೊಡಲಿದೆ.

ಈ ಕುರಿತು ಎರಡು ಕಂಪನಿಗಳು ಒಪ್ಪಂದ ಮಾಡಿಕೊಂಡಿವೆ.

ನಿರ್ಮಾಣವಾಗುತ್ತಿರುವ ಈ ಲಾರಿಗಳು ಹೆಚ್ಚು ದಕ್ಷತೆ ಮತ್ತು ಲಾಭದಾಯಕವಾಗಿ ಕಾರ್ಯಾಚರಿಸಲು ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿವೆ ಎಂದು ವಿಆರ್‌ಎಲ್ ತಿಳಿಸಿದೆ.

ADVERTISEMENT

ಅದಾಗ್ಯೂ ಅಷ್ಟೂ ಲಾರಿ ನಿರ್ಮಾಣಕ್ಕೆ ತಗುಲುವ ಒಟ್ಟು ವೆಚ್ಚ ಬಹಿರಂಗಗೊಂಡಿಲ್ಲ.

‘ವಿಆರ್‌ಎಲ್ ಲಾಜಿಸ್ಟಿಕ್ಸ್ ಮತ್ತು ಅಶೋಕ್ ಲೇಲ್ಯಾಂಡ್ ದೀರ್ಘ ಸಂಬಂಧವನ್ನು ಹೊಂದಿದೆ. ಲಾಜಿಸ್ಟಿಕ್ ಉದ್ಯಮದಲ್ಲಿ ಗ್ರಾಹಕರ ಅಗತ್ಯಗಳಿಗೆ ಸೂಕ್ತವಾದ ಹೊಸ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವಲ್ಲಿ ವಿಆರ್‌ಎಲ್ ​​ನಮ್ಮೊಂದಿಗೆ ಬಹಳ ನಿಕಟವಾಗಿ ಕೆಲಸ ಮಾಡಿದೆ‘ ಎಂದು ಅಶೋಕ್‌ನ ಲೇಲೆಂಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಶೆನು ಅಗರ್ವಾಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.