ನವದೆಹಲಿ: ವಿಮಾನ ಇಂಧನ (ಜೆಟ್ ಇಂಧನ) ದರವನ್ನು ಬುಧವಾರ ಪ್ರತಿ ಕಿಲೋ ಲೀಟರಿಗೆ ಶೇಕಡ 5.2ರಷ್ಟು ಹೆಚ್ಚಿಸಲಾಗಿದೆ. ಇದರಿಂದಾಗಿ ದೇಶದಾದ್ಯಂತ ವಿಮಾನ ಇಂಧನ ದರವು ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿದೆ.
ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳ ಅಧಿಸೂಚನೆ ಪ್ರಕಾರ, ದೆಹಲಿಯಲ್ಲಿ ಪ್ರತಿ ಕಿಲೋ ಲೀಟರ್‌ಗೆ₹ 4,481.63ರಷ್ಟು ಹೆಚ್ಚಾಗಿ ₹ 90,519.79ಕ್ಕೆ ತಲುಪಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆಗೆ ಅನುಗುಣವಾಗಿ ವಿಮಾನ ಇಂಧನ ದರವನ್ನು ಹೆಚ್ಚಿಸಲಾಗಿದೆ. ಬುಧವಾರದ ದರ ಏರಿಕೆಯನ್ನೂ ಪರಿಗಣಿಸಿದಲ್ಲಿ, ಎರಡು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಒಟ್ಟು ನಾಲ್ಕು ಬಾರಿ ದರ ಹೆಚ್ಚಳವಾಗಿದೆ.
2008ರ ಆಗಸ್ಟ್‌ನಲ್ಲಿ ಜೆಟ್ ಇಂಧನ ದರವು ಕಿಲೋ ಲೀಟರಿಗೆ ₹ 71,028.26ಕ್ಕೆ ತಲುಪಿತ್ತು. ಆಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವು ಬ್ಯಾರಲ್‌ಗೆ ₹ 147 ಡಾಲರ್‌ಗಳಷ್ಟಿತ್ತು.
ಬೆಲೆ ಏರಿಕೆ ವಿವರ (ಕಿಲೋ ಲೀಟರಿಗೆ)
ಜನವರಿ 1;₹ 2,039.63
ಜನವರಿ 16;₹ 3,232.87
ಫೆಬ್ರುವರಿ 1;₹ 6,743.25
ಫೆಬ್ರುವರಿ 16;₹ 4,481.63
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.