ನವದೆಹಲಿ: ಮಧ್ಯಮಾವಧಿಯಲ್ಲಿ ಮನೆಗಳ ಬೆಲೆಯು ಸರಾಸರಿ ಶೇಕಡ 4ರಿಂದ ಶೇ 6ರವರೆಗೆ ಹೆಚ್ಚಳ ಕಾಣುವ ನಿರೀಕ್ಷೆ ಇದೆ ಎಂದು ಕ್ರಿಸಿಲ್ ರೇಟಿಂಗ್ಸ್ ಹೇಳಿದೆ. ಕಳೆದ ಎರಡು ಆರ್ಥಿಕ ವರ್ಷಗಳಲ್ಲಿ ಮನೆಗಳ ಬೆಲೆಯು ಎರಡು ಅಂಕಿಗಳ ಪ್ರಮಾಣದಲ್ಲಿ ಬೆಳವಣಿಗೆ ಕಂಡಿತ್ತು.
‘ಮನೆಗಳನ್ನು ಮಾರಾಟ ಮಾಡುವ ರಿಯಲ್ ಎಸ್ಟೇಟ್ ಡೆವಲಪರ್‌ಗಳು ಈ ಆರ್ಥಿಕ ವರ್ಷದಲ್ಲಿ ಹಾಗೂ ಮುಂದಿನ ಆರ್ಥಿಕ ವರ್ಷದಲ್ಲಿ ಮಾರಾಟ ಪ್ರಮಾಣದಲ್ಲಿ ಸ್ಥಿರವಾದ ಏರಿಕೆಯನ್ನು ಕಾಣಲಿದ್ದಾರೆ’ ಎಂದು ಕ್ರಿಸಿಲ್ ಹೇಳಿದೆ.
ಆದರೆ ಬೇಡಿಕೆಗಿಂತಲೂ ಪೂರೈಕೆಯು ಹೆಚ್ಚಿನ ಪ್ರಮಾಣದಲ್ಲಿ ಇರುವ ನಿರೀಕ್ಷೆ ಇದೆ. ಹೀಗಾಗಿ, ರಿಯಲ್ ಎಸ್ಟೇಟ್ ಡೆವಲಪರ್‌ಗಳ ಬಳಿ ಮಾರಾಟಕ್ಕೆ ಲಭ್ಯವಿರುವ ಮನೆಗಳ ಸಂಖ್ಯೆಯು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮತ್ತು ಮುಂದಿನ ಆರ್ಥಿಕ ವರ್ಷದಲ್ಲಿ ಹೆಚ್ಚಳ ಕಾಣುವ ಸಾಧ್ಯತೆ ಇದೆ ಎಂದು ಅದು ಹೇಳಿದೆ.
ಕ್ರಿಸಿಲ್ ಸಂಸ್ಥೆಯು 75 ರಿಯಲ್ ಎಸ್ಟೇಟ್ ಕಂಪನಿಗಳನ್ನು ವಿಶ್ಲೇಷಣೆಗೆ ಒಳಪಡಿಸಿ ಈ ಅಂದಾಜು ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.