ಮುಂಬೈ: ಲಾಕ್‌ಡೌನ್‌ನಿಂದಾಗಿದೇಶಿ ವಿಮಾನಯಾನ ಉದ್ದಿಮೆಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ₹ 24 ಸಾವಿರ ಕೋಟಿಗಳಿಂದ ₹ 25 ಸಾವಿರ ಕೋಟಿ ವರಮಾನ ನಷ್ಟವಾಗುವ ಸಾಧ್ಯತೆ ಇದೆ ಎಂದು ಕ್ರಿಸಿಲ್ ಹೇಳಿದೆ.
ಲಾಕ್‌ಡೌನ್‌ನಿಂದ ವಿಮಾನಯಾನ ಉದ್ದಿಮೆಯು ಶೇ 70ರಷ್ಟು ಗರಿಷ್ಠ ನಷ್ಟ ಅನುಭವಿಸಿದೆ ಎಂದು ಕ್ರಿಸಿಲ್ ಇನ್‌ಫ್ರಾಸ್ಟ್ರಕ್ಚರ್‌ನ ಸರಕು ಮತ್ತು ಸಾರಿಗೆ ವಿಭಾಗದ ನಿರ್ದೇಶಕ ಜಿ. ಪದ್ಮನಾಭನ್ ಹೇಳಿದ್ದಾರೆ.
ವಿಮಾನ ನಿಲ್ದಾಣ ಕಾರ್ಯಾಚರಣೆ ನಡೆಸುವವರಿಗೆ ₹ 5,000 ರಿಂದ ₹ 5,500 ಕೋಟಿ ಮತ್ತು ವಿಮಾನ ನಿಲ್ದಾಣದ ರಿಟೇಲ್ ವಹಿವಾಟುದಾರರಿಗೆ ₹1,700 ರಿಂದ ₹ 1,800 ಕೋಟಿ ನಷ್ಟವಾಗಲಿದೆ ಎಂದು ತಿಳಿಸಿದ್ದಾರೆ.
ಲಾಕ್‌ಡೌನ್‌ಗೂ ಮೊದಲಿನ ಸ್ಥಿತಿಯನ್ನು ತಲುಪಲು ಉದ್ದಿಮೆಗೆ ಕನಿಷ್ಠ 6 ರಿಂದ 8 ತ್ರೈಮಾಸಿಕಗಳು ಬೇಕಾಗಲಿವೆ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.