ADVERTISEMENT

ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜಿ ನಿವೃತ್ತಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 19:48 IST
Last Updated 6 ಜೂನ್ 2019, 19:48 IST
ಪ್ರೇಮ್‌ಜಿ
ಪ್ರೇಮ್‌ಜಿ   

ಬೆಂಗಳೂರು: ದೇಶದ ಮೂರನೇ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸೇವಾ ಸಂಸ್ಥೆಯಾಗಿರುವ ವಿಪ್ರೊದ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನದಿಂದ ಅಜೀಂ ಪ್ರೇಮ್‌ಜಿ ಅವರು ನಿವೃತ್ತಿ ಹೊಂದಲಿದ್ದಾರೆ.

ಪ್ರೇಮ್‌ಜಿ ಅವರು ಜುಲೈ 30ರಿಂದ ಕಾರ್ಯನಿರ್ವಾಹಕಯೇತರ ನಿರ್ದೇಶಕ ಮತ್ತು ಸ್ಥಾಪಕ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಪ್ರೇಮ್‌ಜಿ ಅವರು 53 ವರ್ಷಗಳವರೆಗೆ ಸಂಸ್ಥೆ ಮುನ್ನಡೆಸಿದ್ದಾರೆ.

ರಿಷದ್‌ಗೆ ಹೊಣೆಗಾರಿಕೆ: ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾಗಿರುವಪ್ರೇಮ್‌ಜಿ ಅವರ ಪುತ್ರ ರಿಷದ್‌ ಪ್ರೇಮ್‌ಜಿ ಅವರು ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ADVERTISEMENT

ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅಬಿದಾಲಿ ನಿಮೂಚವಾಲಾ ಅವರ ಹುದ್ದೆಯನ್ನು ಸಿಇಒ ಮತ್ತು ವ್ಯವಸ್ಥಾಪಕ ನಿರ್ದೆಶಕ ಎಂದು ಬದಲಾವಣೆ ಮಾಡಲಾಗಿದೆ.ಷೇರುದಾರರ ಒಪ್ಪಿಗೆ ಪಡೆದ ಬಳಿಕ ಜುಲೈ 31ರಿಂದ ಈ ಬದಲಾವಣೆಗಳು ಜಾರಿಗೆ ಬರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.