ಬೆಂಗಳೂರು: ಖಾಸಗಿ ಜೀವವಿಮಾ ಕಂಪನಿ ಬಜಾಜ್ ಅಲಯನ್ಸ್, 2018-19ನೇ ಹಣಕಾಸು ವರ್ಷದಲ್ಲಿ ಕರ್ನಾಟಕದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ, ಹೊಸ ವಹಿವಾಟು ಪ್ರೀಮಿಯಂ ಸಂಗ್ರಹದಲ್ಲಿ ಶೇಕಡ 57ರಷ್ಟು ಪ್ರಗತಿ ಸಾಧಿಸಿದೆ.
ಕಂಪನಿಯು ₹ 302 ಕೋಟಿ ಮೊತ್ತದ ಹೊಸ ಪ್ರಿಮಿಯಂ ವಹಿವಾಟು ದಾಖಲಿಸಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ ₹ 193 ಕೋಟಿ ಸಂಗ್ರಹವಾಗಿತ್ತು. ಹೊಸ ವೈಯಕ್ತಿಕ ಪಾಲಿಸಿ ಸಂಖ್ಯೆಯಲ್ಲಿಯೂ ಶೇ 65ರಷ್ಟು ಏರಿಕೆ ದಾಖಲಿಸಿದೆ. ‘ರಾಜ್ಯದಲ್ಲಿನ ನಮ್ಮ ವಹಿವಾಟಿನ ಪ್ರಗತಿಯು ಗ್ರಾಹಕ ನಂಬಿಕೆಯನ್ನು ದೃಢೀಕರಿಸಿದೆ’ ಎಂದು ನಿರ್ದೇಶಕ ತರುಣ್ ಛುಗ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.