
ಪ್ರಜಾವಾಣಿ ವಾರ್ತೆ
ಬೆಂಗಳೂರು: ಬಜಾಜ್ ಕನ್ಸುಮರ್ ಕೇರ್, ಬಜಾಜ್ ನೊಮಾರ್ಕ್ಸ್ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಈ ಮೂಲಕ ಕಂಪನಿಯು ವೈಯಕ್ತಿಕ ನೈರ್ಮಲ್ಯ ಉತ್ಪನ್ನಗಳ ತಯಾರಿಕಾ ವಲಯಕ್ಕೆ ಪ್ರವೇಶಿಸಿದೆ. ಸಾಬೂನು ಮತ್ತು ನೀರಿನ ಅಗತ್ಯ ಇಲ್ಲದೇ ವೈರಾಣುಗಳ ವಿರುದ್ಧ ಇದು ಗರಿಷ್ಠ ರಕ್ಷಣೆ ನೀಡಲಿದೆ. 50 ಎಂಎಲ್ (₹ 25), 100 ಎಂಎಲ್ (₹ 50), 200 ಎಂಎಲ್ (₹ 100) ಮತ್ತು ಆಸ್ಪತ್ರೆಗಳ ಬಳಕೆಗೆ 5 ಲೀಟರ್‌ನಲ್ಲಿ (₹ 2,500) ಲಭ್ಯ ಇದೆ ಎಂದು ಕಂಪನಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.