ADVERTISEMENT

ಹಬ್ಬದ ಋತುವಿನಲ್ಲಿ ಗ್ರಾಹಕ ಸಾಲ ನೀಡಿಕೆ ಹೆಚ್ಚಳ: ಬಜಾಜ್‌ ಫೈನಾನ್ಸ್‌

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 14:27 IST
Last Updated 4 ನವೆಂಬರ್ 2025, 14:27 IST
   

ಬೆಂಗಳೂರು: ಖಾಸಗಿ ವಲಯದ ಬ್ಯಾಂಕೇತರ ಹಣಕಾಸು ಕಂಪನಿ (ಎನ್‌ಬಿಎಫ್‌ಸಿ) ಬಜಾಜ್‌ ಫೈನಾನ್ಸ್‌ ಲಿಮಿಟೆಡ್‌ ಈ ಬಾರಿಯ ಹಬ್ಬದ ಋತುವಿನಲ್ಲಿ ನೀಡಿರುವ ಗ್ರಾಹಕ ಸಾಲದ ಮೊತ್ತವು ಹಿಂದಿನ ವರ್ಷದ ಹಬ್ಬದ ಋತುವಿನಲ್ಲಿ ನೀಡಿದ ಗ್ರಾಹಕ ಸಾಲದ ಮೊತ್ತಕ್ಕೆ ಹೋಲಿಸಿದರೆ ಶೇಕಡ 29ರಷ್ಟು ಹೆಚ್ಚಳವಾಗಿದೆ.

ಗ್ರಾಹಕ ಬಳಕೆ ಉತ್ಪನ್ನಗಳ ಖರೀದಿಗೆ ಪಡೆದಿರುವ ಸಾಲದ ಮೊತ್ತದಲ್ಲಿನ ಏರಿಕೆಯು, ಗ್ರಾಹಕರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರವು ಜಿಎಸ್‌ಟಿ ದರದಲ್ಲಿ ತಂದ ಪರಿಷ್ಕರಣೆ, ವೈಯಕ್ತಿಕ ತೆರಿಗೆಯಲ್ಲಿ ಜಾರಿಗೆ ತಂದ ವಿನಾಯಿತಿಗಳ ಧನಾತ್ಮಕ ಪರಿಣಾಮವನ್ನು ತೋರಿಸುತ್ತಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. 

ಸೆಪ್ಟೆಂಬರ್‌ 22ರಿಂದ ಅಕ್ಟೋಬರ್‌ 26ರ ನಡುವಿನ ಅವಧಿಯಲ್ಲಿ ಬಜಾಜ್‌ ಫೈನಾನ್ಸ್‌ ಕಂಪನಿಯು 63 ಲಕ್ಷ ಹೊಸ ಸಾಲ ವಿತರಣೆ ಮಾಡಿರುವುದಾಗಿ ಹೇಳಿದೆ.

ADVERTISEMENT

‘ಸರ್ಕಾರವು ಜಾರಿಗೆ ತಂದ ಜಿಎಸ್‌ಟಿ ಸುಧಾರಣೆಗಳು ಹಾಗೂ ವೈಯಕ್ತಿಕ ತೆರಿಗೆ ಹಂತಗಳಲ್ಲಿನ ಬದಲಾವಣೆಗಳು ದೇಶದಲ್ಲಿ ಬೇಡಿಕೆಗೆ ಹೊಸದಾಗಿ ಉತ್ತೇಜನ ನೀಡುವ ಕೆಲಸ ಮಾಡಿವೆ. ಈ ಕ್ರಮಗಳ ಕಾರಣದಿಂದಾಗಿ ದೇಶದ ಮಧ್ಯಮ ಹಾಗೂ ಕಡಿಮೆ ಆದಾಯದ ಕುಟುಂಬಗಳು ಹಬ್ಬದ ಸಂದರ್ಭದಲ್ಲಿ ಹೆಚ್ಚು ವಿಶ್ವಾಸದಿಂದ ಖರ್ಚು ಮಾಡುವಂತಾಗಿದೆ’ ಎಂದು ಕಂಪನಿಯ ಅಧ್ಯಕ್ಷ ಸಂಜೀವ್ ಬಜಾಜ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.