ADVERTISEMENT

ಕೆವೈಸಿಗೆ ಆಧಾರ್ ಬಳಕೆ: ಆರ್‌ಬಿಐ

ಪಿಟಿಐ
Published 30 ಮೇ 2019, 19:28 IST
Last Updated 30 ಮೇ 2019, 19:28 IST
   

ಮುಂಬೈ: ಬ್ಯಾಂಕ್‌ಗಳು ಗ್ರಾಹಕರ ಒಪ್ಪಿಗೆ ಪಡೆದು ಆಧಾರ್‌ ಅನ್ನು ದಾಖಲೆಗಳ ದೃಢೀಕರಣಕ್ಕೆ ಬಳಸಬಹುದು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಹೇಳಿದೆ.

ಖಾತೆ ತೆರೆಯುವುದೂ ಒಳಗೊಂಡು ವಿವಿಧ ಸೇವೆಗಳನ್ನು ನೀಡುವಾಗಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳುಗ್ರಾಹಕರಿಂದ ಅಗತ್ಯ ಮಾಹಿತಿಗಳನ್ನು ಪಡೆಯಬೇಕು. ಅದಕ್ಕಾಗಿ ಆರ್‌ಬಿಐಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ನಿಯಮ ರೂಪಿಸಿದೆ.

ಗ್ರಾಹಕರು ತಮ್ಮ ಗುರುತಿನ ಉದ್ದೇಶಕ್ಕಾಗಿ ಆಧಾರ್‌ ಸಂಖ್ಯೆಯನ್ನು ಸ್ವಯಂಪ್ರೇರಿತರಾಗಿ ಬಳಸುತ್ತಿದ್ದರೆ, ಬ್ಯಾಂಕ್‌ಗಳು ಅಂತಹ ಗ್ರಾಹಕರ ಆಧಾರ್‌ ದೃಢೀಕರಣ ನಡೆಸಬಹುದು ಎಂದು ಕೆವೈಸಿಯ ತಿದ್ದುಪಡಿ ನಿಯಮದಲ್ಲಿ ತಿಳಿಸಿದೆ.

ADVERTISEMENT

ಮೊಬೈಲ್‌ ಸಿಮ್‌ ಕಾರ್ಡ್‌ ಮತ್ತು ಬ್ಯಾಂಕ್‌ ಖಾತೆಗೆ ಸ್ವಇಚ್ಛೆಯಿಂದ ಆಧಾರ್‌ ಸಂಖ್ಯೆಯನ್ನು ಜೋಡಿಸಲು ಅವಕಾಶ ಕೊಡುವುದಕ್ಕೆ ಆಧಾರ್‌ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.

ನೇರ ನಗದು ವರ್ಗಾವಣೆ (ಡಿಬಿಟಿ) ಯೋಜನೆಯಡಿ ಸರ್ಕಾರದಿಂದ ಯಾವುದೇ ಸಬ್ಸಿಡಿ ಪ್ರಯೋಜನ ಪಡೆಯಬೇಕಾದರೆ ಬ್ಯಾಂಕ್‌ಗಳು ಅಂತಹ ಗ್ರಾಹಕರಿಂದ ಆಧಾರ್‌ ಪಡೆಯಬೇಕು. ಅವರ ಇ–ಕೆವೈಸಿ ದೃಢೀಕರಣವನ್ನೂ ನಡೆಸಬೇಕು ಎಂದು ಆರ್‌ಬಿಐ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.