ADVERTISEMENT

ಬ್ಯಾಂಕುಗಳ ಸಾಲ ನೀಡಿಕೆ, ಠೇವಣಿ ಸಂಗ್ರಹ ಹೆಚ್ಚಳ: ಆರ್‌ಬಿಐ

ಪಿಟಿಐ
Published 2 ಜುಲೈ 2020, 14:08 IST
Last Updated 2 ಜುಲೈ 2020, 14:08 IST
ಸಾಲ
ಸಾಲ   

ಮುಂಬೈ: ಬ್ಯಾಂಕ್‌ಗಳ ಸಾಲ ನೀಡಿಕೆ ಮತ್ತು ಠೇವಣಿ ಸಂಗ್ರಹವು ಕ್ರಮವಾಗಿ ಶೇ 6.18 ಮತ್ತು ಶೇ 11 ರಷ್ಟು ಬೆಳವಣಿಗೆ ಕಂಡಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹೇಳಿದೆ.

2019ರ ಜೂನ್‌ 21ರ ಅಂತ್ಯಕ್ಕೆ ಬ್ಯಾಂಕ್‌ ಸಾಲವು ₹ 96.48 ಲಕ್ಷ ಕೋಟಿ ಇತ್ತು. ಇದು 2020ರ ಜೂನ್‌ 19ರ ಅಂತ್ಯಕ್ಕೆ ₹ 102 ಲಕ್ಷ ಕೋಟಿಗೆ ಏರಿಕೆಯಾಗಿದೆ. ಅದೇ ರೀತಿಯಲ್ಲಿ ಠೇವಣಿ ಮತ್ತವು ₹ 124.92 ಲಕ್ಷ ಕೋಟಿಗಳಿಂದ ₹ 138.67 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.

ಕೈಗಾರಿಕೆಗಳಿಗೆ ಸಾಲ ನೀಡಿಕೆಯು ಮೇನಲ್ಲಿ ಶೇ 6.4ರಿಂದ ಶೇ 1.7ಕ್ಕೆ, ಸೇವಾ ವಲಯಕ್ಕೆ ನೀಡುವ ಸಾಲದ ಪ್ರಮಾಣವು ಶೇ 14.8ರಿಂದ ಶೇ 11.2ಕ್ಕೆ ಹಾಗೂ ವೈಯಕ್ತಿಕ ಸಾಲವು ಶೇ 16.9 ರಿಂದ ಶೇ 10.6ಕ್ಕೆ ಇಳಿಕೆಯಾಗಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.