ADVERTISEMENT

ಏಪ್ರಿಲ್‌–ಡಿಸೆಂಬರ್‌ ವೇಳೆ ಬ್ಯಾಂಕ್‌ ಸಾಲ ಮಂಜೂರು ಪ್ರಮಾಣ ಶೇ 3.2ರಷ್ಟು ಹೆಚ್ಚಳ

ಪಿಟಿಐ
Published 17 ಜನವರಿ 2021, 14:47 IST
Last Updated 17 ಜನವರಿ 2021, 14:47 IST
   

ಮುಂಬೈ: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ಡಿಸೆಂಬರ್‌ ಅವಧಿಯಲ್ಲಿ ಬ್ಯಾಂಕ್‌ ಸಾಲ ನೀಡಿಕೆ ಪ್ರಮಾಣ ಶೇಕಡ 3.2ರಷ್ಟು ವೃದ್ಧಿಯಾಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯ‌ಲ್ಲಿ ಇದು ಶೇ 2.7ರಷ್ಟು ಬೆಳವಣಿಗೆ ಕಂಡಿತ್ತು.

ಠೇವಣಿ ಸಂಗ್ರಹವು ಶೇ 8.5ರಷ್ಟು ಹೆಚ್ಚಾಗಿ ₹ 147.27 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಶೇ 5.1ರಷ್ಟು ಹೆಚ್ಚಳವಾಗಿತ್ತು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬಿಡುಗಡೆ ಮಾಡಿರುವ ಇತ್ತೀಚಿನ ಮಾಹಿತಿ ತಿಳಿಸಿದೆ.

2021ರ ಜನವರಿ 1ಕ್ಕೆ ಕೊನೆಗೊಂಡ 15 ದಿನಗಳಲ್ಲಿ ಬ್ಯಾಂಕ್‌ ಸಾಲ ನೀಡಿಕೆಯು ಶೇ 6.7ರಷ್ಟು ಹಾಗೂ ಠೇವಣಿ ಸಂಗ್ರಹ ಶೇ 11.5ರಷ್ಟು ಹೆಚ್ಚಾಗಿದೆ.

ADVERTISEMENT

ಬ್ಯಾಂಕ್‌ ಸಾಲ ನೀಡಿಕೆಯು ಕೋವಿಡ್‌ ಆರಂಭದ ತಿಂಗಳುಗಳಲ್ಲಿ ಇದ್ದ ಮಟ್ಟಕ್ಕೆ ಮರಳಿದೆ. ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ಶೇ 6.5ರಷ್ಟಿತ್ತು ಎಂದು ಕೇರ್‌ ರೇಟಿಂಗ್ಸ್‌ನ ಇತ್ತೀಚಿನ ವರದಿ ಹೇಳಿದೆ.

ಹಣಕಾಸು ಸ್ಥಿರತೆಯ ಈಚಿನ ವರದಿಯ ಪ್ರಕಾರ, ಬ್ಯಾಂಕ್‌ಗಳ ವಸೂಲಾಗದ ಸರಾಸರಿ ಸಾಲದ ಪ್ರಮಾಣವು 2020ರ ಸೆಪ್ಟೆಂಬರ್‌ನಲ್ಲಿ ಶೇ 7.5ರಷ್ಟು ಇದ್ದಿದ್ದು 2021ರ ಸೆಪ್ಟೆಂಬರ್‌ ವೇಳೆಗೆ ಶೇ 13.5ಕ್ಕೆ ಏರಿಕೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.