ADVERTISEMENT

ಬಡ್ಡಿ ದರ ಇಳಿಸಿದ ಬಿಒಬಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 14:15 IST
Last Updated 5 ಡಿಸೆಂಬರ್ 2025, 14:15 IST
ಬ್ಯಾಂಕ್‌ ಆಫ್‌ ಬರೋಡ
ಬ್ಯಾಂಕ್‌ ಆಫ್‌ ಬರೋಡ   

ನವದೆಹಲಿ: ರೆಪೊ ದರ ತಗ್ಗಿಸುವ ತೀರ್ಮಾನವನ್ನು ಆರ್‌ಬಿಐ ಪ್ರಕಟಿಸಿದ ನಂತರ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಬರೋಡ (ಬಿಒಬಿ) ರೆಪೊ ದರಕ್ಕೆ ಹೊಂದಿಕೊಂಡಿರುವ ಸಾಲಗಳ ಮೇಲಿನ ಬಡ್ಡಿ ದರವನ್ನು ಶೇ 0.25ರಷ್ಟು ಕಡಿತ ಮಾಡುತ್ತಿರುವುದಾಗಿ ಪ್ರಕಟಿಸಿದೆ.

ಬ್ಯಾಂಕ್‌ನ ಈ ತೀರ್ಮಾನದ ಪರಿಣಾಮವಾಗಿ ರೆಪೊ ದರಕ್ಕೆ ಹೊಂದಿಕೊಂಡಿರುವ ಸಾಲದ ಮೇಲಿನ ಬಡ್ಡಿ ದರವು ಶೇ 8.15ರಷ್ಟು ಇರುವುದು ಶೇ 7.90ಗೆ ಇಳಿಕೆಯಾಗಲಿದೆ. ಬ್ಯಾಂಕ್‌ ಆಫ್ ಬರೋಡ ಈ ಸಂಗತಿಯನ್ನು ಷೇರುಪೇಟೆಗೆ ತಿಳಿಸಿದೆ. ಪರಿಷ್ಕೃತ ಬಡ್ಡಿ ದರವು ಡಿಸೆಂಬರ್‌ 6ರಿಂದಲೇ ಅನ್ವಯವಾಗಲಿದೆ ಎಂದೂ ಬ್ಯಾಂಕ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT