ADVERTISEMENT

ಬಿಒಬಿ, ಎಚ್‌ಡಿಎಫ್‌ಸಿ ಬ್ಯಾಂಕ್‌ ಬಡ್ಡಿ ಇಳಿಕೆ

ಪಿಟಿಐ
Published 8 ಜೂನ್ 2025, 15:38 IST
Last Updated 8 ಜೂನ್ 2025, 15:38 IST
   

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಬರೋಡಾ (ಬಿಒಬಿ) ಮತ್ತು ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್‌ ಸಾಲದ ಮೇಲಿನ ಬಡ್ಡಿ ದರವನ್ನು ಕಡಿತಗೊಳಿಸಿವೆ.

ಪರಿಷ್ಕೃತ ಬಡ್ಡಿ ದರವು ಜೂನ್‌ 7ರಿಂದ ಜಾರಿಗೆ ಬಂದಿದೆ ಎಂದು ಬ್ಯಾಂಕ್‌ಗಳು ಭಾನುವಾರ ತಿಳಿಸಿವೆ.

ಬ್ಯಾಂಕ್‌ ಆಫ್‌ ಬರೋಡಾ ರೆ‍‍ಪೊ ಆಧರಿತ ಸಾಲದ ಬಡ್ಡಿ ದರವನ್ನು (ಆರ್‌ಎಲ್‌ಎಲ್‌ಆರ್‌) ಶೇ 0.50ರಷ್ಟು ತಗ್ಗಿಸಿದೆ. ಬಡ್ಡಿ ದರ ಶೇ 8.15 ಇದೆ. 

ADVERTISEMENT

ಎಚ್‌ಡಿಎಫ್‌ಸಿ ಬ್ಯಾಂಕ್‌ ಮಾರ್ಜಿನಲ್‌ ಕಾಸ್ಟ್‌ ಆಫ್‌ ಫಂಡ್ಸ್‌ ಆಧಾರಿತ ಸಾಲದ (ಎಂಸಿಎಲ್‌ಆರ್‌) ಮೇಲಿನ ಬಡ್ಡಿದರವನ್ನು ಶೇ 0.10ರಷ್ಟು ಕಡಿತಗೊಳಿಸಿದ್ದು, ಶೇ 8.90 ಆಗಿದೆ.

ಮೂರು ತಿಂಗಳ ಬಡ್ಡಿ ದರ ಶೇ 8.95, ಆರು ತಿಂಗಳು ಮತ್ತು ಒಂದು ವರ್ಷದ ಬಡ್ಡಿ ದರ ಶೇ 9.05 ಆಗಿದೆ. ಎರಡು ಮತ್ತು ಮೂರು ವರ್ಷದ ಸಾಲದ ಬಡ್ಡಿ ದರ ಶೇ 9.20ರಿಂದ ಶೇ 9.10ಕ್ಕೆ ಇಳಿದಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಶುಕ್ರವಾರ ಆರ್‌ಬಿಐ ರೆಪೊ ದರವನ್ನು ಶೇ 0.50ರಷ್ಟು ಕಡಿತ ಮಾಡಿತ್ತು. ಇದರ ಬೆನ್ನಲ್ಲೇ ಬ್ಯಾಂಕ್‌ಗಳು ಬಡ್ಡಿ ದರ ತಗ್ಗಿಸಿದ್ದು, ಇದರ ಪ್ರಯೋಜನವನ್ನು ಗ್ರಾಹಕರಿಗೆ ನೀಡುತ್ತಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.