ಬೆಂಗಳೂರು: ಬ್ಯಾಂಕ್ ಆಫ್ ಬರೋಡಾ (ಬಿಒಬಿ) ನಗರದ ಸೌತ್ ಎಂಡ್ ರಸ್ತೆಯಲ್ಲಿ ‘ಫಿಜಿಟಲ್’ ಶಾಖೆ ಆರಂಭಿಸಿದೆ.
ಈ ಶಾಖೆಯಲ್ಲಿ ಗ್ರಾಹಕರು ಪ್ಯಾನ್ ನವೀಕರಣ, ಇ–ಮೇಲ್ ಮೂಲಕ ಖಾತೆ ಹೇಳಿಕೆ ಸ್ವೀಕರಿಸುವುದು, ಟಿಡಿಎಸ್ ಪ್ರಮಾಣ ಪತ್ರ ಸ್ವೀಕಾರ, ನಾಮಿನಿ ನವೀಕರಣ ಇತ್ಯಾದಿ ಸೇವೆಯನ್ನು ಪಡೆಯಬಹುದು ಎಂದು ಬ್ಯಾಂಕ್ ತಿಳಿಸಿದೆ.
ಗೃಹ ಸಾಲದ ಬಗ್ಗೆ ವಿಚಾರಣೆ, ಉಳಿತಾಯ ಖಾತೆ, ಅವಧಿ ಠೇವಣಿ, ಕಾರು ಸಾಲ ಮುಂತಾದ ಎಲ್ಲಾ ವೈಯಕ್ತಿಕಗೊಳಿಸಿದ ಮತ್ತು ಹಣಕಾಸುಯೇತರ ಸೇವೆಗಳ ಸಹಾಯಕ್ಕಾಗಿ ಗ್ರಾಹಕರು ವಿಡಿಯೊ ಕರೆ ಮೂಲಕ ಬ್ಯಾಂಕ್‌ನ ಸಂಪರ್ಕ ಕೇಂದ್ರವನ್ನು ನೇರವಾಗಿ ಸಂಪರ್ಕಿಸಬಹುದು ಎಂದು ತಿಳಿಸಿದೆ.
ಉದ್ಘಾಟನೆ: ಶಾಖೆ ಉದ್ಘಾಟಿಸಿದ ಬ್ಯಾಂಕ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಸಂಜಯ್ ವಿ. ಮುದಲಿಯಾರ್, ‘ಗ್ರಾಹಕರ ಅಗತ್ಯತೆ ಪೂರೈಸಲು ಬ್ಯಾಂಕ್ ಬೆಂಗಳೂರಿನಲ್ಲಿ ಮೊದಲ ಫಿಜಿಟಲ್ ಶಾಖೆ ಆರಂಭಿಸಿದೆ. ಇದರೊಂದಿಗೆ ಫಿಜಿಟಲ್ ಶಾಖೆಗಳ ಸಂಖ್ಯೆ 4ಕ್ಕೆ ಏರಿದೆ. ಇದು ಗ್ರಾಹಕರಿಗೆ ಭೌತಿಕ ಮತ್ತು ಡಿಜಿಟಲ್ ಸೇವೆಗಳನ್ನು ಒದಗಿಸುತ್ತದೆ’ ಎಂದು ಹೇಳಿದರು.
ಈ ವೇಳೆ ಬ್ಯಾಂಕ್‌ನ ಉಪ ಪ್ರಧಾನ ವ್ಯವಸ್ಥಾಪಕ ಮಾನಸ್ ಮಿಶ್ರಾ ಮತ್ತು ಪ್ರಾದೇಶಿಕ ಮುಖ್ಯಸ್ಥ ಪ್ರಶಾಂತ್ ಅವಾದ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.