ADVERTISEMENT

ಉಳಿತಾಯ ಖಾತೆಗೆ ಶುಲ್ಕ ಇಲ್ಲ: ಬ್ಯಾಂಕ್ ಆಫ್ ಬರೋಡ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 15:16 IST
Last Updated 7 ಜುಲೈ 2025, 15:16 IST
ಬಿಒಬಿ
ಬಿಒಬಿ   

ಬೆಂಗಳೂರು: ಉಳಿತಾಯ ಖಾತೆಗಳಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದೆ ಇದ್ದರೆ ಶುಲ್ಕ ವಿಧಿಸುವ ಕ್ರಮವನ್ನು ಜುಲೈ 1ರಿಂದ ಕೈಬಿಡಲಾಗಿದೆ ಎಂದು ಬ್ಯಾಂಕ್ ಆಫ್ ಬರೋಡ ತಿಳಿಸಿದೆ.

‘ಉಳಿತಾಯ ಖಾತೆಗಳಲ್ಲಿ ಮಾಸಿಕ ಸರಾಸರಿ ಮೊತ್ತ ಕಾಯ್ದುಕೊಳ್ಳದಿದ್ದರೂ ಗ್ರಾಹಕರಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ಇದು ಬ್ಯಾಂಕ್‌ನ ಗ್ರಾಹಕ ಸ್ನೇಹಿ ಕ್ರಮ. ಆದರೆ, ಪ್ರೀಮಿಯಂ ಉಳಿತಾಯ ಖಾತೆಯ ಯೋಜನೆಗಳಿಗೆ ಈ ವಿನಾಯಿತಿ ಇರುವುದಿಲ್ಲ’ ಎಂದು ಬ್ಯಾಂಕ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT