ADVERTISEMENT

ಬಿಒಎಂ: ಸಾಲ ನೀಡಿಕೆ ಹೆಚ್ಚಳ

ಪಿಟಿಐ
Published 4 ಜುಲೈ 2025, 12:53 IST
Last Updated 4 ಜುಲೈ 2025, 12:53 IST
ಬಿಒಎಂ
ಬಿಒಎಂ   

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಮಹಾರಾಷ್ಟ್ರ (ಬಿಒಎಂ) ಸಾಲ ನೀಡಿಕೆಯಲ್ಲಿ ಶೇ 15ರಷ್ಟು ಏರಿಕೆ ದಾಖಲಿಸಿದೆ.

2024–25ರ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹2.09 ಲಕ್ಷ ಕೋಟಿ ಸಾಲ ನೀಡಲಾಗಿತ್ತು. ಈ ಬಾರಿ ₹2.41 ಲಕ್ಷ ಕೋಟಿ ಸಾಲ ನೀಡಲಾಗಿದೆ ಎಂದು ಬ್ಯಾಂಕ್ ಷೇರುಪೇಟೆಗೆ ಶುಕ್ರವಾರ ತಿಳಿಸಿದೆ.

ಒಟ್ಟು ಠೇವಣಿಯು ಶೇ 14ರಷ್ಟು ಹೆಚ್ಚಳವಾಗಿದ್ದು, ₹3.09 ಲಕ್ಷ ಕೋಟಿಯಾಗಿದೆ. ಬ್ಯಾಂಕ್‌ನ ಒಟ್ಟು ವ್ಯವಹಾರ (ಸಾಲ ಮತ್ತು ಠೇವಣಿ) ₹5.46 ಲಕ್ಷ ಕೋಟಿಯಷ್ಟಾಗಿದ್ದು, ಶೇ 14.64ರಷ್ಟು ಏರಿಕೆಯಾಗಿದೆ. ಒಟ್ಟು ಠೇವಣಿಯಲ್ಲಿ ಚಾಲ್ತಿ ಖಾತೆ ಮತ್ತು ಉಳಿತಾಯ ಖಾತೆ (ಸಿಎಎಸ್‌ಎ) ಅನುಪಾತವು ಶೇ 50.07ರಷ್ಟಾಗಿದೆ. ಸಾಲ ಮತ್ತು ಠೇವಣಿ ಅನುಪಾತವು ಶೇ 79.04ರಷ್ಟಾಗಿದೆ ಎಂದು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.