ADVERTISEMENT

ರೆಪೊ ಕಡಿತ: ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ಬಡ್ಡಿ ಇಳಿಕೆ

ಪಿಟಿಐ
Published 7 ಡಿಸೆಂಬರ್ 2025, 13:28 IST
Last Updated 7 ಡಿಸೆಂಬರ್ 2025, 13:28 IST
<div class="paragraphs"><p> ಆರ್‌ಬಿಐ</p></div>

ಆರ್‌ಬಿಐ

   

ನವದೆಹಲಿ: ರೆಪೊ ದರದ ಜೊತೆ ಹೊಂದಿಕೊಂಡಿರುವ ಸಾಲಗಳ ಮೇಲಿನ ಬಡ್ಡಿ ದರವನ್ನು ಶೇಕಡ 0.25ರಷ್ಟು ಕಡಿಮೆ ಮಾಡುತ್ತಿರುವುದಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಮಹಾರಾಷ್ಟ್ರ (ಬಿಒಎಂ) ಭಾನುವಾರ ಹೇಳಿದೆ.

ಗೃಹ ಸಾಲ, ಶಿಕ್ಷಣ ಸಾಲ, ಕಾರು ಸಾಲದ ಮೇಲಿನ ಬಡ್ಡಿಯು ಇದರಿಂದಾಗಿ ಕಡಿಮೆ ಆಗಲಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ರೆಪೊ ದರವನ್ನು ತಗ್ಗಿಸಿದ ಎರಡೇ ದಿನಗಳಲ್ಲಿ ಬಿಒಎಂ ಈ ಕ್ರಮವನ್ನು ಪ್ರಕಟಿಸಿದೆ.

ADVERTISEMENT

ಬಡ್ಡಿ ಪರಿಷ್ಕರಣೆಯು ಶನಿವಾರದಿಂದಲೇ ಜಾರಿಗೆ ಬಂದಿದೆ ಎಂದು ಬ್ಯಾಂಕ್‌ ಹೇಳಿದೆ. ಈಗ ಬ್ಯಾಂಕ್‌ನ ಗೃಹ ಸಾಲದ ಬಡ್ಡಿ ದರವು ಶೇ 7.10ರಿಂದ, ಕಾರು ಸಾಲದ ಬಡ್ಡಿ ದರವು ಶೇ 7.45ರಿಂದ ಆರಂಭವಾಗುತ್ತದೆ. ಇದು ಬ್ಯಾಂಕಿಂಗ್ ಉದ್ಯಮದಲ್ಲಿ ಈಗ ಲಭ್ಯವಿರುವ ಅತ್ಯಂತ ಕಡಿಮೆ ಬಡ್ಡಿ ದರಗಳಲ್ಲಿ ಒಂದು ಎಂದು ಬಿಒಎಂ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.