ADVERTISEMENT

ಉದ್ದೇಶಿತ ಮುಷ್ಕರದಿಂದ ಬ್ಯಾಂಕಿಂಗ್ ಸೇವೆಗೆ ಅಡ್ಡಿ ಸಂಭವ: ಕೆನರಾ ಬ್ಯಾಂಕ್

ಪಿಟಿಐ
Published 4 ಮಾರ್ಚ್ 2021, 11:19 IST
Last Updated 4 ಮಾರ್ಚ್ 2021, 11:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಹಲವು ಬ್ಯಾಂಕ್‌ ಒಕ್ಕೂಟಗಳು ಇದೇ 15 ಮತ್ತು 16ರಂದು ಮುಷ್ಕರಕ್ಕೆ ಕರೆ ನೀಡಿವೆ. ಇದರಿಂದಾಗಿ ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಉಂಟಾಗುವ ಸಂಭವವಿದೆ ಎಂದು ಕೆನರಾ ಬ್ಯಾಂಕ್‌ ಗುರುವಾರ ಹೇಳಿದೆ.

ಬ್ಯಾಂಕ್‌ ಒಕ್ಕೂಟಗಳ ಸಂಯುಕ್ತ ವೇದಿಕೆಯು (ಯುಎಫ್‌ಬಿಯು) ಇದೇ ತಿಂಗಳ 15 ಮತ್ತು 16ರಂದು ಮುಷ್ಕರಕ್ಕೆ ಕರೆ ನೀಡಿದೆ. ಬ್ಯಾಂಕ್‌ಗೆ ಸಂಬಂಧಿಸಿದ ಸಮಸ್ಯೆಗಳಿಗಾಗಿ ಅಲ್ಲ, ಉದ್ಯಮದ ಮಟ್ಟದಲ್ಲಿ ಇರುವ ಸಮಸ್ಯೆಗಳ ನಿವಾರಣೆಗೆ ಒತ್ತಾಯಿಸಿ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಭಾರತೀಯ ಬ್ಯಾಂಕ್‌ಗಳ ಒಕ್ಕೂಟವು (ಐಬಿಎ) ಮಾಹಿತಿ ನೀಡಿದೆ ಎಂದು ಷೇರುಪೇಟೆಗೆ ಕೆನರಾ ಬ್ಯಾಂಕ್‌ ತಿಳಿಸಿದೆ.

ಉದ್ದೇಶಿತ ಮುಷ್ಕರದ ದಿನ ಕಚೇರಿಗಳು ಮತ್ತು ಶಾಖೆಗಳ ಕಾರ್ಯಾಚರಣೆಯಲ್ಲಿ ಯಾವುದೇ ವ್ಯತ್ಯಯ ಆಗದಂತೆ ಮಾಡಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹೀಗಿದ್ದರೂ ಸೇವೆಗಳ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಬ್ಯಾಂಕ್‌ ಹೇಳಿದೆ.

ADVERTISEMENT

ಸರ್ಕಾರಿ ಸ್ವಾಮ್ಯದ ಎರಡು ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ ಉದ್ದೇಶದ ವಿರುದ್ಧ ಬ್ಯಾಂಕ್‌ ನೌಕರರ ಒಕ್ಕೂಟಗಳು ಮುಷ್ಕರಕ್ಕೆ ಕರೆ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.