ಕೋಲ್ಕತ್ತ: ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದನ್ನು ಉತ್ತೇಜಿಸುವ ಸಲುವಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಸೀಮಿತ ಅವಧಿಯ ನಿಶ್ಚಿತ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿದರದ ಕೊಡುಗೆ ಘೋಷಿಸಿಸುತ್ತಿವೆ.
ಕೋವಿಡ್ ಲಸಿಕೆಯ ಒಂದು ಡೋಸ್ ಪಡೆದ ಗ್ರಾಹಕರಿಗೆ 999 ದಿನಗಳ ನಿಶ್ಚಿತ ಠೇವಣಿಗಳಿಗೆ ಶೇಕಡ 0.30ಯಷ್ಟು ಹೆಚ್ಚಿನ ಬಡ್ಡಿದರ ನೀಡುವುದಾಗಿ ಯೂಕೊ ಬ್ಯಾಂಕ್ ಹೇಳಿದೆ. ‘ಯುಕೊವ್ಯಾಕ್ಸಿ-999’ ಹೆಸರಿನ ಈ ಕೊಡುಗೆಯು ಸೆಪ್ಟೆಂಬರ್ 30ರವರೆಗೂ ಇರಲಿದೆ ಎಂದು ತಿಳಿಸಿದೆ.
ಸೆಂಟ್ರಲ್ ಬ್ಯಾಂಕ್ ಸಹ ಈಚೆಗಷ್ಟೇ ‘ಇಮ್ಯೂನ್ ಇಂಡಿಯಾ ಡೆಪಾಸಿಟ್ ಸ್ಕೀಮ್’ ಜಾರಿಗೊಳಿಸಿದ್ದು, ಶೇ 0.25ರಷ್ಟು ಹೆಚ್ಚುವರಿ ಬಡ್ಡಿದರದ ಕೊಡುಗೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.