ADVERTISEMENT

ಮುದ್ರಾ ಯೋಜನೆ: 6 ವರ್ಷಗಳಲ್ಲಿ ₹ 15 ಲಕ್ಷ ಕೋಟಿ ಮಂಜೂರು

ಪಿಟಿಐ
Published 8 ಏಪ್ರಿಲ್ 2021, 4:48 IST
Last Updated 8 ಏಪ್ರಿಲ್ 2021, 4:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಮುದ್ರಾ ಯೋಜನೆಯಡಿಆರು ವರ್ಷಗಳಲ್ಲಿ 28.68 ಕೋಟಿ ಫಲಾನುಭವಿಗಳಿಗೆ ₹ 14.96 ಲಕ್ಷ ಕೋಟಿ ಮಂಜೂರು ಮಾಡಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಬುಧವಾರ ಮಾಹಿತಿ ನೀಡಿದೆ.

ತಯಾರಿಕೆ, ವ್ಯಾಪಾರ ಮತ್ತು ಸೇವಾ ವಲಯಗಳು ಹಾಗೂ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಆದಾಯ ಸೃಷ್ಟಿಸುವ ಉದ್ದೇಶಕ್ಕೆ ಸಾಲ ನೀಡಲಾಗುತ್ತಿದೆ.

ಸಣ್ಣ ಉದ್ದಿಮೆಗಳನ್ನು ಉತ್ತೇಜಿಸುವ ಸಲುವಾಗಿ 2015ರ ಏಪ್ರಿಲ್‌ 8ರಂದು ಮುದ್ರಾ ಯೋಜನೆಗೆ ಚಾಲನೆ ನೀಡಲಾಗಿದೆ. ಜಾಮೀನು ಅಗತ್ಯ ಇಲ್ಲದೇ ಗರಿಷ್ಠ ₹ 10 ಲಕ್ಷದವರೆಗೂ ಸಾಲ ನೀಡುವ ಯೋಜನೆ ಇದಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.