ADVERTISEMENT

ಬಾಟಾದಿಂದ ವಿಸ್ತರಣಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2019, 20:00 IST
Last Updated 12 ಅಕ್ಟೋಬರ್ 2019, 20:00 IST
ಬಾಟಾ ಮಳಿಗೆ
ಬಾಟಾ ಮಳಿಗೆ   

ಬೆಂಗಳೂರು: ದೇಶದ ಅತಿದೊಡ್ಡ ಪಾದರಕ್ಷೆ ಬ್ರ್ಯಾಂಡ್‌ ಆಗಿರುವ ಬಾಟಾ ಇಂಡಿಯಾ ಲಿಮಿಟೆಡ್‌, ತನ್ನ ವಹಿವಾಟನ್ನು ಮುಂದಿನ 2 ವರ್ಷಗಳಲ್ಲಿದೇಶದಾದ್ಯಂತ 180 ಪಟ್ಟಣಗಳಿಗೆ ವಿಸ್ತರಿಸಲು ಮುಂದಾಗಿದೆ.

‘ಮಹಾನಗರಗಳಾಚೆಗೂ ಎರಡು ಮತ್ತು ಮೂರನೇ ಹಂತದ ನಗರಗಳಿಗೆ ವಹಿವಾಟು ವಿಸ್ತರಿಸಲು ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಸಣ್ಣ ನಗರಗಳಲ್ಲಿ ಫ್ರಾಂಚೈಸಿ ಮಾದರಿಯಲ್ಲಿ 500 ಮಳಿಗೆ ಆರಂಭಿಸಲಾಗುವುದು’ ಎಂದು ಕಂಪನಿಯ ಸಿಇಒ ಸಂದೀಪ್‌ ಕಟಾರಿಯಾ ಹೇಳಿದ್ದಾರೆ.

ಕರ್ನಾಟಕದಲ್ಲಿ ಚಿಕ್ಕಬಳ್ಳಾಪುರ, ಗದಗ–ಬೆಟಗೇರಿ, ಹರಿಹರ, ದೊಡ್ಡಬಳ್ಳಾಪುರ, ಚಿಂತಾಮಣಿ, ಚನ್ನಪಟ್ಟಣ, ಚಾಮರಾಜನಗರ, ದಾಂಡೇಲಿ, ಕೊಳ್ಳೇಗಾಲ ಮತ್ತು ಹಾವೇರಿ ನಗರಗಳಲ್ಲಿ ಮಳಿಗೆಗಳನ್ನು ಆರಂಭ ಮಾಡಲು ಉದ್ದೇಶಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.