ADVERTISEMENT

ಬಿಸಿಸಿಐ ಜೊತೆ ಏಷ್ಯನ್ ಪೇಂಟ್ಸ್ ಪಾಲುದಾರಿಕೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 16:06 IST
Last Updated 26 ನವೆಂಬರ್ 2025, 16:06 IST
ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಜೊತೆ ಏಷ್ಯನ್ ಪೇಂಟ್ಸ್ ‘ಭಾರತ ಕ್ರಿಕೆಟ್‌ನ ಅಧಿಕೃತ ಕಲರ್ ಪಾರ್ಟನರ್’ ಒಪ್ಪಂದ ಮಾಡಿಕೊಂಡಿದೆ. ಈ ವೇಳೆ ಏಷ್ಯನ್ ಪೇಂಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಮಿತ್ ಸಿಂಗ್ಲೆ ಮತ್ತು ಬಿಸಿಸಿಐ ವಕ್ತಾರ ದೇವಜಿತ್ ಇದ್ದರು

ಬೆಂಗಳೂರು: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಜೊತೆ ಏಷ್ಯನ್ ಪೇಂಟ್ಸ್ ‘ಭಾರತ ಕ್ರಿಕೆಟ್‌ನ ಅಧಿಕೃತ ಕಲರ್ ಪಾರ್ಟ್ನರ್’ ಒಪ್ಪಂದ ಮಾಡಿಕೊಂಡಿದೆ.

ಇದು ಮೂರು ವರ್ಷಗಳ ಅವಧಿಯ ಒಪ್ಪಂದ. ಬಿಸಿಸಿಐ ಜೊತೆ ಒಪ್ಪಂದ ಮಾಡಿಕೊಂಡ ಮೊದಲ ಪೇಂಟ್ಸ್ ಕಂಪನಿ ತಾನು ಎಂದು ಏಷ್ಯನ್ ಪೇಂಟ್ಸ್ ಪ್ರಕಟಣೆ ತಿಳಿಸಿದೆ.

‘ದೇಶದ 140 ಕೋಟಿ ಹೃದಯಗಳನ್ನು ಕ್ರಿಕೆಟ್ ಒಗ್ಗೂಡಿಸುತ್ತದೆ. ಬಿಸಿಸಿಐ ಜೊತೆ ಪಾಲುದಾರಿಕೆ ಮಾಡಿಕೊಂಡಿರುವುದು ನಮಗೆ ಸಂತಸ ಮೂಡಿಸಿದೆ’ ಎಂದು ಏಷ್ಯನ್ ಪೇಂಟ್ಸ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಮಿತ್ ಸಿಂಗ್ಲೆ ಹೇಳಿದ್ದಾರೆ.

ADVERTISEMENT

ಬಿಸಿಸಿಐ ವಕ್ತಾರ ದೇವಜಿತ್ ಸೈಕಿಯಾ ಮಾತನಾಡಿ, ‘ಜನರ ಜೀವನಕ್ಕೆ ಬಣ್ಣ ಮತ್ತು ಭಾವನೆಗಳನ್ನು ಸೇರಿಸುವ ಏಷ್ಯನ್ ಪೇಂಟ್ಸ್‌ನ ಪರಂಪರೆಯು ಭಾರತೀಯ ಕ್ರಿಕೆಟ್‌ನ ಉತ್ಸಾಹವನ್ನು ಹೆಚ್ಚಿಸುತ್ತದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.