ADVERTISEMENT

ಬಿಇಎಂಎಲ್‌ ವಿಪ್ರೊ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 20:31 IST
Last Updated 16 ಸೆಪ್ಟೆಂಬರ್ 2019, 20:31 IST

ಬೆಂಗಳೂರು:ಕೃತಕ ಬುದ್ಧಿಮತ್ತೆ, ಅಂತರಿಕ್ಷ, ಕೈಗಾರಿಕೆಗಳಲ್ಲಿ ಸ್ವಯಂಚಾಲನೆ, 3ಡಿ ಪ್ರಿಂಟಿಂಗ್ ಕ್ಷೇತ್ರಗಳಲ್ಲಿ ಜತೆಗೂಡಿ ಕೆಲಸ ಮಾಡುವ ಉದ್ದೇಶದಿಂದ ಬಿಇಎಂಎಲ್‌ ಮತ್ತು ವಿಪ್ರೊ ಇನ್‌ಫ್ರಾಸ್ಟ್ರಕ್ಚರ್‌ ಎಂಜಿನಿಯರಿಂಗ್‌ (ಡಬ್ಲ್ಯುಐಎನ್‌) ಒಪ್ಪಂದ ಮಾಡಿಕೊಂಡಿವೆ.

ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಕಂಪನಿಯೊಂದಿಗಿನ ವಿಪ್ರೊದ ಮೊದಲ ಪಾಲುದಾರಿಕೆ ಇದಾಗಿದೆ ಎಂದು ಜಂಟಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಕೇಂದ್ರ ಸರ್ಕಾರದ ಭಾರತದಲ್ಲಿಯೇ ತಯಾರಿಸಿ ಕಾರ್ಯಕ್ರಮಕ್ಕೆ ಉತ್ತಮ ಕೊಡುಗೆ ನೀಡುವಲ್ಲಿ ಈ ಒಪ್ಪಂದ ಎರಡೂ ಕಂಪನಿಗಳಿಗೆ ನೆರವಾಗಲಿದೆ’ ಎಂದು ಬಿಇಎಂಎಲ್‌ ಸಿಎಂಡಿ ಡಿ.ಕೆ. ಹೋಟಾ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.