ADVERTISEMENT

ಬೆಳಗಾವಿ| ಆಶಾ ಕಾರ್ಯಕರ್ತೆಯರಿಗೆ ₹ 25 ಲಕ್ಷ

ಹಾಲು ಖರೀದಿ ದರ ₹ 2 ಇಳಿಕೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 13:58 IST
Last Updated 11 ಜೂನ್ 2020, 13:58 IST

‘ಕೊರೊನಾ ಸೋಂಕಿನ ಭೀತಿಯ ನಡುವೆಯೂ ಮುಂಚೂಣಿಯಲ್ಲಿ ಹೋರಾಡುತ್ತಿರುವ ಜಿಲ್ಲೆಯ ಆಶಾ ಕಾರ್ಯಕರ್ತೆಯರನ್ನು ಗೌರವಿಸುವ ನಿಟ್ಟಿನಲ್ಲಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಬೆಮುಲ್‌) ವತಿಯಿಂದ ₹ 25 ಲಕ್ಷ ಪ್ರೋತ್ಸಾಹಧನ ನೀಡಲು ಈಚೆಗೆ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ’ ಎಂದು ವ್ಯವಸ್ಥಾಪಕ ನಿರ್ದೇಶಕ ಉಬೇದುಲ್ಲಾ ಖಾನ್‌ ತಿಳಿಸಿದರು.

‘ಪ್ರೋತ್ಸಾಹಧನದ ಚೆಕ್ ವಿತರಣೆಯ ಮೊದಲ ಕಾರ್ಯಕ್ರಮ ಜೂನ್‌ 13ರಂದು ಬೆಳಿಗ್ಗೆ 10ಕ್ಕೆ ರಾಯಬಾಗದ ಸ್ಟೇಷನ್ ಹಿಲ್ ಸಭಾಂಗಣದಲ್ಲಿ ನಡೆಯಲಿದೆ. ಅಧಿಕೃತ ಉದ್ಘಾಟನೆಯನ್ನು ಜೂನ್‌ 14ರಂದು ಗೋಕಾಕದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ನೆರವೇರಿಸಲಿದ್ದಾರೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಸಹಕಾರ ಇಲಾಖೆಯ ನಿರ್ದೇಶನದ ಪ್ರಕಾರ, ಆಶಾ ಕಾರ್ಯಕರ್ತೆಯರಿಗೆ ತಲಾ ₹3ಸಾವಿರ ನೀಡಲಾಗುವುದು’ ಎಂದರು.

ADVERTISEMENT

‘ಹಾಲಿಗೆ ಬೇಡಿಕೆ ಕುಸಿದಿರುವುದರಿಂದಾಗಿ ರೈತರಿಂದ ಖರೀದಿ ದರವನ್ನು ₹ 2 ಇಳಿಕೆ (ಲೀಟರ್‌ಗೆ) ಮಾಡಲಾಗಿದೆ. ಆಕಳು ಹಾಲಿಗೆ ಸಂಘಕ್ಕೆ ₹ 24 ಹಾಗೂ ರೈತರಿಗೆ ₹ 22, ಎಮ್ಮೆ ಹಾಲಿಗೆ ಸಂಘಕ್ಕೆ ₹ 34 ಹಾಗೂ ರೈತರಿಗೆ ₹ 32 ಕೊಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.