ನವದೆಹಲಿ: ಜಗತ್ತಿನ ಪ್ರಮುಖ 46 ನಗರಗಳಲ್ಲಿನ ಪ್ರೀಮಿಯಂ ವರ್ಗದ ಮನೆಗಳ ವಾರ್ಷಿಕ ಬೆಲೆ ಏರಿಕೆಯ ಪಟ್ಟಿಯಲ್ಲಿ ಬೆಂಗಳೂರು 4ನೇ ಸ್ಥಾನದಲ್ಲಿದೆ. ಮುಂಬೈ ಮತ್ತು ದೆಹಲಿ ಕ್ರಮವಾಗಿ 6 ಮತ್ತು 15ನೇ ಸ್ಥಾನದಲ್ಲಿವೆ.
ಬೆಂಗಳೂರಿನಲ್ಲಿ ಮನೆಗಳ ದರ ಏರಿಕೆಯು ವಾರ್ಷಿಕ ಶೇ 10.2ರಷ್ಟು ಇದೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ನೈಟ್ ಫ್ರಾಂಕ್ ವರದಿ ಸೋಮವಾರ ತಿಳಿಸಿದೆ.
ಮೊದಲ ಸ್ಥಾನದಲ್ಲಿ ದಕ್ಷಿಣ ಕೊರಿಯಾದ ಸೋಲ್ ಇದೆ. ಇಲ್ಲಿನ ಪ್ರೀಮಿಯಂ ವರ್ಗದ ಮನೆಗಳ ವಾರ್ಷಿಕ ಬೆಲೆ ಹೆಚ್ಚಳವು ಶೇ 25.2ರಷ್ಟಿದೆ. ನಂತರದ ಸ್ಥಾನದಲ್ಲಿ ಟೋಕಿಯೊ (ಶೇ 16.3) ಮತ್ತು ದುಬೈ (ಶೇ 15.8) ಇವೆ. ಬೆಲೆ ಏರಿಕೆ ಪ್ರಮಾಣವು ಮುಂಬೈನಲ್ಲಿ ಶೇ 8.7ರಷ್ಟು ಮತ್ತು ದೆಹಲಿಯಲ್ಲಿ ಶೇ 3.9ರಷ್ಟಿದೆ.
ಕಳೆದ ಒಂದು ವರ್ಷದಲ್ಲಿ ಜಗತ್ತಿನ ಪ್ರೀಮಿಯಂ ವರ್ಗದ ಮನೆಗಳ ಸರಾಸರಿ ಬೆಲೆ ಶೇ 2.3ರಷ್ಟು ಹೆಚ್ಚಾಗಿದೆ ಎಂದು ಜಾಗತಿಕ ಪ್ರೀಮಿಯಂ ನಗರಗಳ ಸೂಚ್ಯಂಕ (ಪಿಜಿಸಿಐ) ಏಪ್ರಿಲ್–ಜೂನ್ ವರದಿಯಲ್ಲಿ ಸಂಸ್ಥೆಯು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.