ADVERTISEMENT

ಭಾರತದ ಆರ್ಥಿಕತೆ ಬಗ್ಗೆ ಜಾಗತಿಕ ರೇಟಿಂಗ್ಸ್‌ ವರದಿ ಅಲ್ಲಗಳೆದ ಸರ್ಕಾರ

ಪಿಟಿಐ
Published 11 ಜೂನ್ 2020, 16:02 IST
Last Updated 11 ಜೂನ್ 2020, 16:02 IST
ಕೆ. ಸುಬ್ರಮಣಿಯನ್‌
ಕೆ. ಸುಬ್ರಮಣಿಯನ್‌   

ನವದೆಹಲಿ: ಅಂತರರಾಷ್ಟ್ರೀಯ ಸಂಸ್ಥೆಗಳು ಭಾರತದ ಆರ್ಥಿಕತೆ ಬಗ್ಗೆ ಇತ್ತೀಚೆಗೆ ನೀಡಿರುವ ರೇಟಿಂಗ್ಸ್‌ಗಳನ್ನು ಕೇಂದ್ರ ಸರ್ಕಾರ ಸ್ಪಷ್ಟವಾಗಿ ತಳ್ಳಿ ಹಾಕಿದೆ.

‘ದೇಶದ ಸಾಲ ಮರುಪಾವತಿ ಸಾಮರ್ಥ್ಯವು ಶ್ರೇಷ್ಠ ದರ್ಜೆಯದಾಗಿದೆ’ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್‌ ಹೇಳಿದ್ದಾರೆ.

ದೇಶದ ರೇಟಿಂಗ್‌ ತಗ್ಗಿಸಿದ್ದ ಮೂಡೀಸ್‌ ಇನ್ವೆಸ್ಟರ್ಸ್‌ ಸರ್ವಿಸ್‌ ಮತ್ತು ಹೂಡಿಕೆ ದರ್ಜೆ ತಗ್ಗಿಸಿದ್ದ ಎಸ್‌ಆ್ಯಂಡ್‌ಪಿ ವರದಿಗಳಿಗೆ ಸರ್ಕಾರದ ಮೊದಲ ಪ್ರತಿಕ್ರಿಯೆ ಇದಾಗಿದೆ.

ADVERTISEMENT

‘ದೇಶದ ಆರ್ಥಿಕ ವೃದ್ಧಿ ದರವು ಪ್ರಸಕ್ತ ಹಣಕಾಸು ವರ್ಷದಲ್ಲಿ ಕುಸಿತಗೊಳ್ಳಲಿದೆ. ಅಕ್ಟೋಬರ್‌ನಿಂದ ಮಾರ್ಚ್‌ವರೆಗಿನ ಅವಧಿಯಲ್ಲಿ ಆರ್ಥಿಕತೆಯಲ್ಲಿ ಚೇತರಿಕೆ ಕಂಡು ಬಂದರೆ ಈ ಕುಸಿತ ಸೀಮಿತಗೊಳ್ಳಲಿದೆ’ ಎಂದು ಸುಬ್ರಮಣಿಯನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.