
ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ (ಬಿಇಎಲ್) ತೆರಿಗೆ ನಂತರದ ಲಾಭದಲ್ಲಿ ಶೇ 20ರಷ್ಟು ಹೆಚ್ಚಳವಾಗಿದೆ.
ಕಳೆದ ಆರ್ಥಿಕ ವರ್ಷದಲ್ಲಿ ₹1,316 ಕೋಟಿ ಲಾಭ ಆಗಿತ್ತು. ಅದು ಈ ಬಾರಿ ₹1,590 ಕೋಟಿಯಷ್ಟಾಗಿದೆ ಎಂದು ಕಂಪನಿ ಷೇರುಪೇಟೆಗೆ ಬುಧವಾರ ತಿಳಿಸಿದೆ. ವರಮಾನದಲ್ಲಿ ಶೇ 23ರಷ್ಟು ಹೆಚ್ಚಳವಾಗಿದ್ದು, ₹7,121 ಕೋಟಿಗೆ ತಲುಪಿದೆ.
ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿ ಉತ್ತಮ ಫಲಿತಾಂಶ ದಾಖಲಿಸಿದೆ. ಹೀಗಾಗಿ ಕಂಪನಿಯ ಷೇರಿನ ಮೌಲ್ಯ ಬುಧವಾರದ ವಹಿವಾಟಿನಲ್ಲಿ ಶೇ 9ರವರೆಗೆ ಹೆಚ್ಚಳವಾಗಿದೆ. ಪ್ರತಿ ಷೇರಿನ ಬೆಲೆ ಬಿಎಸ್‌ಇಯಲ್ಲಿ ₹453.40 ಆಗಿದೆ.
ಷೇರಿನ ಮೌಲ್ಯ ಏರಿಕೆಯಿಂದ ಕಂಪನಿಯ ಮಾರುಕಟ್ಟೆ ಮೌಲ್ಯಕ್ಕೆ ಒಂದೇ ದಿನ ₹27,082 ಕೋಟಿ ಸೇರ್ಪಡೆಯಾಗಿದ್ದು, ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯ ₹3.31 ಲಕ್ಷ ಕೋಟಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.