ADVERTISEMENT

ಬಿಇಎಲ್‌ ವಹಿವಾಟು ಶೇ 9ರಷ್ಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 25 ಮೇ 2022, 12:46 IST
Last Updated 25 ಮೇ 2022, 12:46 IST
ಆನಂದಿ ರಾಮಲಿಂಗಮ್
ಆನಂದಿ ರಾಮಲಿಂಗಮ್   

ಬೆಂಗಳೂರು: ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್‌) 2021–22ನೇ ಹಣಕಾಸು ವರ್ಷದಲ್ಲಿ ₹ 15,044 ಕೋಟಿ ಮೊತ್ತದ ವಹಿವಾಟು ನಡೆಸಿದೆ.

2020–21ನೇ ಹಣಕಾಸು ವರ್ಷದಲ್ಲಿ ₹ 13,818 ಕೋಟಿ ಮೊತ್ತದ ವಹಿವಾಟು ನಡೆಸಿತ್ತು. ಇದಕ್ಕೆ ಹೋಲಿಸಿದರೆ 2021–22ರಲ್ಲಿ ವಹಿವಾಟು ಶೇಕಡ 9ರಷ್ಟು ಬೆಳವಣಿಗೆ ಕಂಡಿದೆ.

ಕಂಪನಿಯು ವಹಿವಾಟಿನಲ್ಲಿ ಶೇ 15ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆಯಲ್ಲಿತ್ತು. ಆದರೆ, ಕೋವಿಡ್‌ ಸಾಂಕ್ರಾಮಿಕ, ಜಾಗತಿಕ ಮಟ್ಟದಲ್ಲಿ ಸೆಮಿಕಂಡಕ್ಟರ್ ಚಿಪ್‌ ಕೊರತೆ ಹಾಗೂ ಜಾಗತಿಕ ಬಿಕ್ಕಟ್ಟಿನಿಂದಾಗಿ ನಿರೀಕ್ಷಿತ ಪ್ರಮಾಣದ ಬೆಳವಣಿಗೆ ಸಾಧ್ಯವಾಗಲಿಲ್ಲ ಎಂದು ಕಂಪನಿಯ ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ (ಸಿಎಂಡಿ) ಆನಂದಿ ರಾಮಲಿಂಗಮ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ತೆರಿಗೆ ನಂತರದ ಲಾಭವು ₹ 2,065 ಕೋಟಿಯಿಂದ ₹ 2,349 ಕೋಟಿಗೆ ಏರಿಕೆ ಆಗಿದೆ. ಮಾರುಕಟ್ಟೆ ಬಂಡವಾಳವು ₹ 60 ಸಾವಿರ ಕೋಟಿಗೆ ತಲುಪಿದೆ ಎಂದು ಅವರು ಮಾಹಿತಿ ನೀಡಿದರು.

ಒಟ್ಟಾರೆ ವಹಿವಾಟಿನಲ್ಲಿ ರಕ್ಷಣಾ ಉಪಕರಣಗಳ ಮಾರಾಟದ ವಹಿವಾಟು ಶೇ 88ರಷ್ಟಿದೆ. ದೇಶಿ ತಂತ್ರಜ್ಞಾನದಿಂದ ಆಗಿರುವ ವಹಿವಾಟು ಶೇ 78ರಷ್ಟಾಗಿದೆ. ಸಂಶೋಧನೆ ಮತ್ತು ಅಭಿವೃದ್ಧಿ ಮೇಲಿನ ವೆಚ್ಚವನ್ನು ₹ 873 ಕೋಟಿಯಿಂದ ₹ 1,045 ಕೋಟಿಗೆ ಹೆಚ್ಚಿಸಲಾಗಿದೆ ಎಂದರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.