ನವದೆಹಲಿ: ಸ್ವತಂತ್ರ ನಿರ್ದೇಶಕರನ್ನು ನೇಮಕಾತಿ ಮಾಡಿಕೊಳ್ಳದಿದ್ದಕ್ಕೆ ಸರ್ಕಾರಿ ಸ್ವಾಮ್ಯದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್‌ಗೆ (ಬಿಎಚ್‌ಇಎಲ್) ಮುಂಬೈ ಷೇರುಪೇಟೆ (ಬಿಎಸ್‌ಇ) ಮತ್ತು ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ತಲಾ ₹5.36 ಲಕ್ಷ ದಂಡ ವಿಧಿಸಿವೆ.
ದಂಡವನ್ನು ಮನ್ನಾ ಮಾಡುವಂತೆ ಷೇರು ವಿನಿಮಯ ಕೇಂದ್ರಗಳಿಗೆ ಕೋರಲಾಗುವುದು ಎಂದು ಬಿಎಚ್‌ಇಎಲ್ ಷೇರುಪೇಟೆಗೆ ಸೋಮವಾರ ತಿಳಿಸಿದೆ.
ಬಿಎಚ್‌ಇಎಲ್ ಸರ್ಕಾರದ ಕಂಪನಿ. ಸ್ವತಂತ್ರ ನಿರ್ದೇಶಕರು ಸೇರಿದಂತೆ ನಿರ್ದೇಶಕರನ್ನು ಕೇಂದ್ರ ಸರ್ಕಾರವೇ ನೇಮಿಸುತ್ತದೆ. ಸ್ವತಂತ್ರ ನಿರ್ದೇಶಕರನ್ನು ನೇಮಕ ಮಾಡುವ ಮೂಲಕ ನಿಯಮಗಳನ್ನು ಪಾಲಿಸುವಂತೆ ಬಿಎಚ್‌ಇಎಲ್ ನಿರಂತರವಾಗಿ ಸರ್ಕಾರವನ್ನು ಕೋರುತ್ತಿದೆ ಎಂದು ತಿಳಿಸಿದೆ.
ಜೂನ್ ತ್ರೈಮಾಸಿಕದ ಅಂತ್ಯದ ವೇಳೆಗೆ ಬಿಎಚ್‌ಇಎಲ್‌ನ ನಿರ್ದೇಶಕರ ಮಂಡಳಿಯಲ್ಲಿ ಸ್ವತಂತ್ರ ನಿರ್ದೇಶಕರ ಸಂಖ್ಯೆ ಇರಬೇಕಾಗಿರುವುದಕ್ಕಿಂತ ಶೇ 50ರಷ್ಟು ಕಡಿಮೆ ಇದೆ. ಹೀಗಾಗಿ ನಿಯಮ ಪಾಲನೆ ಮಾಡದಿದ್ದಕ್ಕೆ ಬಿಎಸ್‌ಇ ಮತ್ತು ಎನ್‌ಎಸ್‌ಇ ದಂಡ ವಿಧಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.