ADVERTISEMENT

ಬಿಗ್ ಬಜಾರ್: ಮಿಸ್‌ ಕಾಲ್‌ಕೊಡಿ; ಒಂದು ವರ್ಷ ಉಚಿತ ಶಾಪಿಂಗ್ ಮಾಡಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2018, 12:49 IST
Last Updated 31 ಅಕ್ಟೋಬರ್ 2018, 12:49 IST
   

ಬೆಂಗಳೂರು: ಚಿಲ್ಲರೆ ಮಾರಾಟ ಮಳಿಗೆ ಬಿಗ್ ಬಜಾರ್‌ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಉತ್ತಮ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ.

ಉತ್ಪನ್ನಗಳ ಮಾಹಿತಿ ನೀಡುವ ಸಲುವಾಗಿ ಬಿಗ್ ಬಜಾರ್ ಮತ್ತು ಪ್ರೊಪಗಾಂಡ ಇಂಡಿಯಾ ಸಹಯೋಗದಲ್ಲಿ ಈ ಡಿಜಿಟಲ್ ಅಭಿಯಾನ ನಡೆಯುತ್ತಿದೆ.

ಬಿಗ್‌ಬಜಾರ್ ಬುಧವಾರ ಏರ್ಪಡಿಸಿದ್ದ ಮಹಾಮಜಾ ಫ್ಯಾಮಿಲಿ ಎಂಬಒಂದು ಗಂಟೆಯ ಫೇಸ್‌ಬುಕ್ ಲೈವ್‌ ಕಾರ್ಯಕ್ರಮದಲ್ಲಿ ಮಾನ್ವಿತಾ ಕಾಮತ್, ಡಾಲಿ ಧನಂಜಯ್, ಹರ್ಷಿಕಾ ಪೂಣಚ್ಚ, ಅಗ್ನಿಸಾಕ್ಷಿ ಖ್ಯಾತಿಯ ಸೂರ್ಯ, ಪ್ರಥಮ್, ವಾಸು ದೀಕ್ಷಿತ್, ಚಂದ್ರಕಲಾ ಮೋಹನ್ ಇನ್ನಿತರರುಪಾಲ್ಗೊಂಡಿದ್ದಾರೆ. ಚಂದನವನದ ನಟ ನಟಿಯರುಇದೇ ಮೊದಲ ಬಾರಿಗೆ ಬಿಗ್‌ಬಜಾರ್‌ ಪ್ರಚಾರಕ್ಕೆಬಂದದ್ದು ವಿಶೇಷ.

ADVERTISEMENT

ಕನ್ನಡ ರಾಜ್ಯೋತ್ಸವಕ್ಕಾಗಿ ವಿಶೇಷ ಆಫರ್‌ಗಳನ್ನು ಪ್ರಕಟಿಸಿರುವ ಬಿಗ್‌ಬಜಾರ್ 18002705533 ಈ ನಂಬರ್‌ಗೆ ಮಿಸ್‌ಕಾಲ್ ನೀಡಿದವರಿಗೆ ಒಂದು ವರ್ಷ ಉಚಿತವಾಗಿ ಶಾಪಿಂಗ್ ಮಾಡುವ ಅವಕಾಶವನ್ನು ಮುಂದಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.