ಬೆಂಗಳೂರು: ಜೈವಿಕ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಸಂಸ್ಥೆ ಬಯೊಕಾನ್, ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ ನಾಲ್ಕನೆ ತ್ರೈಮಾಸಿಕದಲ್ಲಿ ₹ 213 ಕೋಟಿ ನಿವ್ವಳ ಲಾಭ ಗಳಿಸಿದೆ.
ವರ್ಷದ ಹಿಂದೆ ಇದೇ ಅವಧಿಯಲ್ಲಿನ ₹ 130 ಕೋಟಿ ನಿವ್ವಳ ಲಾಭಕ್ಕೆ ಹೋಲಿಸಿದರೆ, ಈ ಬಾರಿಯ ಲಾಭದ ಪ್ರಮಾಣವು ಶೇ 64ರಷ್ಟು ಹೆಚ್ಚಳಗೊಂಡಿದೆ.
2018–19ರ ಹಣಕಾಸು ವರ್ಷದ ಒಟ್ಟಾರೆ ವರಮಾನವು ₹ 1,528 ಕೋಟಿಗಳಷ್ಟಾಗಿದೆ. ಒಂದು ವರ್ಷದ ಹಿಂದೆ ಈ ಮೊತ್ತವು ₹ 1,169 ಕೋಟಿಗಳಷ್ಟಿತ್ತು.ಬೋನಸ್ ಷೇರು: ಪ್ರತಿ ಷೇರಿಗೆ ಒಂದು ಬೋನಸ್ ಷೇರು (1;1) ನೀಡಲು ಸಂಸ್ಥೆಯ ನಿರ್ದೇಶಕ ಮಂಡಳಿಯು ತನ್ನ ಅನುಮೋದನೆ ನೀಡಿದೆ. ಪ್ರತಿಯೊಂದು ಷೇರಿಗೆ ₹ 5ರ ಮುಖಬೆಲೆಯ ಒಂದು ಬೋನಸ್ ಷೇರು ವಿತರಿಸಲಾಗುವುದು. ಬೋನಸ್ ಷೇರು ಸೇರ್ಪಡೆ ಮಾಡುವ ಮುಂಚೆ, ಪ್ರತಿ ಷೇರಿಗೆ ₹ 1ರಂತೆ ಅಂತಿಮ ಲಾಭಾಂಶ ನೀಡಲೂ ಸಂಸ್ಥೆ ಉದ್ದೇಶಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.