ADVERTISEMENT

ಟಾಟಾಗೆ ಬಿಸ್ಲೆರಿ ಮಾರಲ್ಲ ಎಂದ ರಮೇಶ್‌: ಕಂಪನಿ ಮುನ್ನಡೆಸಲಿದ್ದಾರೆ ಪುತ್ರಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2023, 9:06 IST
Last Updated 22 ಮಾರ್ಚ್ 2023, 9:06 IST
   

ದೇಶದ ಪ್ರಮುಖ ಪ್ಯಾಕ್‌ ಮಾಡಿದ ನೀರಿನ ಮಾರಾಟಗಾರ ಕಂಪನಿ ‘ಬಿಸ್ಲೆರಿ‘ಯನ್ನು ಖರೀದಿ ಮಾಡುವು ವ್ಯವಹಾರದಿಂದ ಟಾಟಾ ಸಮೂಹವು ಹಿಂದೆ ಸರಿದ ಬೆನ್ನಲ್ಲೇ ಇದೀಗ, ಬಿಸ್ಲೆರಿಯ ಸಂಸ್ಥಾಪಕ ರಮೇಶ್‌ ಚೌಹಾಣ್‌ ಅವರ ಪುತ್ರಿ ಜಯಂತಿ ಚೌಹಾಣ್‌ ಅವರು ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ ಎಂದು ಕಂಪನಿ ಹೇಳಿದೆ.

ಉದ್ಯಮವನ್ನು ಮಾರಾಟ ಮಾಡುವ ಯಾವುದೇ ಉದ್ದೇಶ ಇಲ್ಲ. ಈ ಬಗ್ಗೆ ಯಾರ ಜತೆಯೂ ಮಾತುಕತೆ ನಡೆಸಿಲ್ಲ. ಸಿಇಒ ಏಂಜಲೋ ಜಾರ್ಜ್‌ ನೇತೃತ್ವದ ತಂಡ ಕಂಪನಿಯನ್ನು ಮುನ್ನಡೆಸಲಿದ್ದು, ತಮ್ಮ ಪುತ್ರಿ ಜಯಂತಿಯ ಉದ್ಯಮವನ್ನು ನೋಡಿಕೊಳ್ಳಲಿದ್ದಾರೆ ಎಂದು ರಮೇಶ್‌ ಅವರ ಹೇಳಿಕೆಯನ್ನು ಉಲ್ಲೇಖಿಸಿ ‘ಎನ್‌ಡಿಟಿವಿ‘ ವರದಿ ಮಾಡಿದೆ.

ಸದ್ಯ ಜಯಂತಿಯವರು ಕಂಪನಿಯ ಉಪಾಧ್ಯಕ್ಷೆಯಾಗಿದ್ದು, ಕಳೆದ ಕೆಲವು ವರ್ಷಗಳಿಂದ ಉದ್ಯಮದ ಭಾಗವಾಗಿದ್ದಾರೆ.

ADVERTISEMENT

ಕಂಪನಿಯನ್ನು ಮಾರಾಟ ಮಾಡಲು ರಮೇಶ್‌ ಅವರು ಕಳೆದ ನಾಲ್ಕು ತಿಂಗಳಿನಿಂದ ಟಾಟಾ ಕನ್ಸೂಮರ್‌ ಪ್ರಾಡೆಕ್ಟ್‌ ಲಿಮಿಟೆಡ್‌ ಜತೆ ಮಾತುಕತೆ ನಡೆಸಿದ್ದರು. ಇದೀಗ ಅವರ ಹೇಳಿಕೆಯಿಂದಾಗಿ ಮಾತುಕತೆ ಮುರಿದು ಬಿದ್ದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.