ಸಿಂಗಪುರ: ಕ್ರಿಪ್ಟೊ ಟ್ರೇಡಿಂಗ್ ಕಂಪನಿಯಾದ ಬಕ್ಟ್ ಖರೀದಿಗೆ ಡೊನಾಲ್ಡ್ ಟ್ರಂಪ್ ಒಡೆತನದ ಸಾಮಾಜಿಕ ಮಾಧ್ಯಮ ಕಂಪನಿಯು ಮಾತುಕತೆ ನಡೆಸಿರುವ ಬೆನ್ನಲ್ಲೇ, ಬಿಟ್‌ಕಾಯಿನ್ ಮೌಲ್ಯವು ಮೊದಲ ಬಾರಿಗೆ 94 ಸಾವಿರ ಅಮೆರಿಕನ್ ಡಾಲರ್‌ಗೆ (₹79.32 ಲಕ್ಷ) ಮುಟ್ಟಿದೆ.
ಅಮೆರಿಕದ ನಿಯೋಜಿತ ಅಧ್ಯಕ್ಷ ಟ್ರಂಪ್ ಅವರ ಅಧಿಕಾರಾವಧಿಯಲ್ಲಿ ಕ್ರಿಪ್ಟೊಕರೆನ್ಸಿ ಮಾರುಕಟ್ಟೆ ಬಲವರ್ಧನೆಗೊಳ್ಳಲಿದೆ ಎಂಬ ಆಶಾಭಾವ ಹೂಡಿಕೆದಾರರಲ್ಲಿ ಮೂಡಿದೆ. ಇದಕ್ಕೆ ಪೂರಕವಾದ ಆಡಳಿತ ಸ್ನೇಹಿ ಕ್ರಮಗಳನ್ನು ಜಾರಿಗೊಳಿಸುವ ನಿರೀಕ್ಷೆಯಿದೆ. ಹಾಗಾಗಿ, ಬಿಟ್‌ಕಾಯಿನ್ ಬೆಲೆಯು ಏರಿಕೆಯ ಹಾದಿ ಹಿಡಿದಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.