ADVERTISEMENT

ಬ್ಲ್ಯೂಡಾರ್ಟ್‌: ಬೆಲೆ ಏರಿಕೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 17:11 IST
Last Updated 30 ಸೆಪ್ಟೆಂಬರ್ 2025, 17:11 IST
   

ಬೆಂಗಳೂರು: ಸರಕು ಸಾಗಣೆ ಕ್ಷೇತ್ರದ ‍ಪ್ರಮುಖ ಕಂಪನಿಗಳ ಪೈಕಿ ಒಂದಾಗಿರುವ ಬ್ಲ್ಯೂಡಾರ್ಟ್‌, ಜನವರಿ 1ರಿಂದ ಅನ್ವಯ ಆಗುವಂತೆ ತನ್ನ ಸೇವೆಗಳ ಬೆಲೆಯನ್ನು ಹೆಚ್ಚಿಸಲಿದೆ.

ದರ ಏರಿಕೆಯು ಶೇ 9ರಿಂದ ಶೇ 12ರವರೆಗೆ ಇರಲಿದೆ ಎಂದು ಕಂಪನಿಯು ತಿಳಿಸಿದೆ. ಕಂಪನಿಯು ತನ್ನ ಸೇವೆಗಳಲ್ಲಿ ಗುಣಮಟ್ಟವನ್ನು ಖಾತರಿಪಡಿಸುವ ಉದ್ದೇಶದಿಂದ ಪ್ರತಿ ವರ್ಷವೂ ಬೆಲೆ ಪರಿಷ್ಕರಣೆ ಮಾಡುತ್ತದೆ.

ವೇಗ, ವಿಶ್ವಾಸಾರ್ಹತೆ, ಗ್ರಾಹಕ ಕೇಂದ್ರಿತ ನಡೆಯನ್ನು ಉಳಿಸಿಕೊಳ್ಳಲು, ವೆಚ್ಚಗಳ ಏರಿಕೆಯ ಪರಿಣಾಮವನ್ನು ನಿಭಾಯಿಸಲು ಈ ಬೆಲೆ ಏರಿಕೆಯು ಅನಿವಾರ್ಯ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.