
ಪಿಟಿಐನವದೆಹಲಿ: ಜರ್ಮನಿಯ ವಾಹನ ತಯಾರಿಕಾ ಕಂಪನಿ ಬಿಎಂಡಬ್ಲ್ಯುನ ದ್ವಿಚಕ್ರ ವಾಹನ ವಿಭಾಗವಾದ ಬಿಎಂಡಬ್ಲ್ಯು ಮೋಟೊರಾಡ್ ಇಂಡಿಯಾ, ತನ್ನ ವಾಹನಗಳ ಬೆಲೆಯನ್ನು ಶೇ 6ರ ವರೆಗೆ ಹೆಚ್ಚಳ ಮಾಡಲು ಮುಂದಾಗಿದೆ. ಪರಿಷ್ಕೃತ ದರವು ಜನವರಿ 1ರಿಂದ ಜಾರಿಗೆ ಬರಲಿದೆ.
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಮತ್ತು ಯುರೊ ಎದುರು ರೂಪಾಯಿ ಮೌಲ್ಯ ಇಳಿಕೆ ಆಗಿದೆ. ಅಲ್ಲದೆ, ಕಚ್ಚಾ ವಸ್ತುಗಳು ಮತ್ತು ಸಾರಿಗೆ ಬೆಲೆ ಹೆಚ್ಚಳವಾಗಿದೆ. ಹೀಗಾಗಿ ದರ ಹೆಚ್ಚಳಕ್ಕೆ ಮುಂದಾಗಿರುವುದಾಗಿ ಕಂಪನಿಯ ಭಾರತದ ಅಧ್ಯಕ್ಷ ಮತ್ತು ಸಿಇಒ ಹರದೀಪ್ ಸಿಂಗ್ ಬಿ. ಹೇಳಿದ್ದಾರೆ.
ಕಂಪನಿಯ ವೆಬ್‌ಸೈಟ್‌ನ ಪ್ರಕಾರ ವಾಹನಗಳ ಬೆಲೆ ₹2.81 ಲಕ್ಷದಿಂದ ₹48.63 ಲಕ್ಷದವರೆಗೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.