ನವದೆಹಲಿ: 2022–23ನೇ ಮೌಲ್ಯಮಾಪನ ವರ್ಷದಲ್ಲಿನ ₹20 ಕೋಟಿ ತೆರಿಗೆ ಬಾಕಿಗೆ ಸಂಬಂಧಿಸಿದಂತೆ ತಂತ್ರಜ್ಞಾನ ಮತ್ತು ಸೇವಾ ಪೂರೈಕೆದಾರ ಬಾಷ್ ಇಂಡಿಯಾ ಕಂಪನಿಗೆ ಆದಾಯ ತೆರಿಗೆ ಇಲಾಖೆಯು ನೋಟಿಸ್ ನೀಡಿದೆ.
ಆದಾಯ ತೆರಿಗೆ ಇಲಾಖೆಯ ಮೌಲ್ಯಮಾಪನ ವಿಭಾಗವು ಈ ನೋಟಿಸ್ ನೀಡಿದ್ದು, ಮಾರ್ಚ್ 28ರಂದು ನೋಟಿಸ್ ಸ್ವೀಕರಿಸಲಾಗಿದೆ. ಇದು ₹1.80 ಕೋಟಿ ಬಡ್ಡಿ ಸಹ ಒಳಗೊಂಡಿದೆ. ಈ ಕುರಿತು ಮೇಲ್ಮನವಿ ಸಲ್ಲಿಸಲಾಗುವುದು ಎಂದು ಕಂಪನಿ ಸೋಮವಾರ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.