ಬೆಂಗಳೂರು: ವಾಹನ ಬಿಡಿಭಾಗ ತಯಾರಿಕೆ ಮತ್ತು ತಂತ್ರಜ್ಞಾನ ಸೇವಾ ಸಂಸ್ಥೆ ಬಾಷ್ ಲಿಮಿಟೆಡ್ 2019-20ರ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ₹ 81 ಕೋಟಿ ನಿವ್ವಳ ಲಾಭ ಗಳಿಸಿದೆ.
‘ಕೋವಿಡ್ ಪಿಡುಗಿನ ಕಾರಣಕ್ಕೆ ವಹಿವಾಟು ಕುಸಿತ, ಹೊಸ ಯೋಜನೆಗಳಿಗೆ ಹಣ ತೆಗೆದು ಇರಿಸಿರುವುದರಿಂದ ನಿವ್ವಳ ಲಾಭ ಕಡಿಮೆಯಾಗಿದೆ. ವರ್ಷದ ಹಿಂದಿನ ಇದೇ ಅವಧಿಯಲ್ಲಿನ ₹ 411 ಕೋಟಿ ಲಾಭಕ್ಕೆ ಹೋಲಿಸಿದರೆ ಈ ಬಾರಿ ಶೇ 80ರಷ್ಟು ಕಡಿಮೆಯಾಗಿದೆ. ವಾರ್ಷಿಕ ವಹಿವಾಟಿನ ವರಮಾನವು ₹ 9,842 ಕೋಟಿಗಳಷ್ಟಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸೌಮಿತ್ರ ಭಟ್ಟಾಚಾರ್ಯ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.