Britannia logo
ಬೆಂಗಳೂರು: ಪ್ರಮುಖ ಎಫ್‌ಎಂಸಿಜಿ ಕಂಪನಿ ಬ್ರಿಟಾನಿಯಾ ಇಂಡಸ್ಟ್ರೀಸ್ ಲಿಮಿಟೆಡ್, ತಾನು ದರ ಸಮರಕ್ಕೆ ಇಳಿಯುವುದಿಲ್ಲ ಎಂದು ಭಾನುವಾರ ತಿಳಿಸಿದೆ.
ಸ್ಥಳೀಯ ಕಂಪನಿಗಳಿಂದ ಉಂಟಾಗಿರುವ ಸ್ಪರ್ಧೆಯನ್ನು ಎದುರಿಸಲು ಸ್ಥಳೀಯ ಮಾರುಕಟ್ಟೆಯ ಕಡೆ ಗಮನ ನೀಡಲಾಗುವುದು ಎಂದು ಕಂಪನಿಯ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವರುಣ್ ಬೆರ್ರಿ ಹೇಳಿದ್ದಾರೆ.
ಕಂಪನಿಯು, ಗುಡ್ ಡೇ, ಮ್ಯಾರಿ ಗೋಲ್ಡ್ ಮತ್ತು ಟೈಗರ್ ಬಿಸ್ಕತ್ತುಗಳನ್ನು ತಯಾರಿಸುತ್ತದೆ. ಇವುಗಳ ಬೆಲೆಯನ್ನು ಹೆಚ್ಚಿಸುವುದಿಲ್ಲ. ಇದು ಬ್ರ್ಯಾಂಡ್ ಹೆಸರನ್ನು ಸದೃಢಗೊಳಿಸಲಿದೆ ಮತ್ತು ದೇಶದ ಎಲ್ಲೆಡೆ ವಿತರಣೆ ಜಾಲ ಹೊಂದುವ ಮೂಲಕ ಕಡಿಮೆ ಜನಸಂಖ್ಯೆ ಹೊಂದಿರುವ ಪ್ರದೇಶದಲ್ಲೂ ಉತ್ಪನ್ನ ದೊರೆಯುವಂತೆ ಮಾಡಲಾಗುವುದು ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.