ADVERTISEMENT

ಆಸ್ತಿ ನಗದೀಕರಣ: ಬಿಎಸ್‌ಎನ್‌ಎಲ್‌ಗೆ ₹12,984 ಕೋಟಿ ಗಳಿಕೆ

ಪಿಟಿಐ
Published 12 ಮಾರ್ಚ್ 2025, 14:08 IST
Last Updated 12 ಮಾರ್ಚ್ 2025, 14:08 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತೀಯ ಸಂಚಾರ ನಿಗಮ ಲಿಮಿಟೆಡ್ (ಬಿಎಸ್‌ಎನ್‌ಎಲ್‌) ಮತ್ತು ಮಹಾನಗರ ಟೆಲಿಕಾಂ ನಿಗಮ ಲಿಮಿಟೆಡ್‌ (ಎಂಟಿಎನ್‌ಎಲ್‌) 2019ರಿಂದ ಪ್ರಸಕ್ತ ವರ್ಷದ ಜನವರಿವರೆಗೆ ಆಸ್ತಿ ನಗದೀಕರಣದ ಮೂಲಕ ₹12,984 ಕೋಟಿ ಗಳಿಸಿವೆ. 

ಸ್ಥಳ, ಕಟ್ಟಡ, ಟವರ್‌ ಮಾರಾಟ ಮತ್ತು ಫೈಬರ್‌ ಸೇವೆ ಮೂಲಕ ಈ ಮೊತ್ತ ಗಳಿಸಲಾಗಿದೆ ಎಂದು ಕೇಂದ್ರ ಸಂವಹನ ಖಾತೆಯ ರಾಜ್ಯ ಸಚಿವ ಪೆಮ್ಮಸಾನಿ ಚಂದ್ರಶೇಖರ್‌ ಅವರು, ಬುಧವಾರ ಲೋಕಸಭೆಗೆ ತಿಳಿಸಿದ್ದಾರೆ.

ಭೂಮಿ ಮತ್ತು ಕಟ್ಟಡಗಳ ಮಾರಾಟದಿಂದ ಬಿಎಸ್‌ಎನ್‌ಎಲ್‌ ₹2,387 ಕೋಟಿ ಮತ್ತು ಎಂಟಿಎನ್‌ಎಲ್‌ ₹2,134 ಕೋಟಿ ಗಳಿಸಿದೆ. ಟವರ್‌ ಮತ್ತು ಫೈಬರ್‌ ಸೇವೆಯಿಂದ ಕ್ರಮವಾಗಿ ₹8,204 ಕೋಟಿ ಮತ್ತು ₹258 ಕೋಟಿ ಗಳಿಸಿವೆ ಎಂದು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.