ADVERTISEMENT

ಎರಡನೇ ಸುತ್ತಿನ ವಿಆರ್‌ಎಸ್‌ ಹಿಂಪಡೆಯಲು BSNL ನೌಕರರ ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2024, 15:28 IST
Last Updated 31 ಡಿಸೆಂಬರ್ 2024, 15:28 IST
bsnl
bsnl   

ನವದೆಹಲಿ: ಎರಡನೇ ಸುತ್ತಿನ ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್‌) ಜಾರಿ ನಿರ್ಧಾರದಿಂದ ಹಿಂದೆ ಸರಿಯುವಂತೆ ನೌಕರರ ಒಕ್ಕೂಟವು ಬಿಎಸ್‌ಎನ್‌ಎಲ್‌ ಆಡಳಿತ ವಿಭಾಗವನ್ನು ಒತ್ತಾಯಿಸಿದೆ.

‘ಬಿಎಸ್‌ಎನ್‌ಎಲ್‌ ಆರ್ಥಿಕ ಸಂಕಷ್ಟಕ್ಕೆ ನೌಕರರು ಕಾರಣರಲ್ಲ, ಬದಲಾಗಿ ಆದಾಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವಲ್ಲಿ ಆಡಳಿತ ವಿಭಾಗ ವಿಫಲವಾಗಿದೆ’ ಎಂದು ಬಿಎಸ್‌ಎನ್‌ಎಲ್‌ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪಿ. ಅಭಿಮನ್ಯು ಅವರು ಸಂಸ್ಥೆಗೆ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ. 

ಇನ್ನೊಂದು ಸುತ್ತಿನ ವಿಆರ್‌ಎಸ್‌ ಮೂಲಕ ಬಿಎಸ್‌ಎನ್‌ಎಲ್ ಆಡಳಿತ ಮಂಡಳಿಯು ನೌಕರರ ಸಂಖ್ಯೆಯಲ್ಲಿ ಶೇ 35ರಷ್ಟು ಕಡಿತಗೊಳಿಸಲು ಮುಂದಾಗಿದೆ ಎಂಬ ವರದಿಯ ಬೆನ್ನಲ್ಲೇ ನೌಕರರ ಒಕ್ಕೂಟ ಅಸಮಾಧಾನ ವ್ಯಕ್ತಪಡಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.