ADVERTISEMENT

ಕಾಫಿ ಡೇ: ₹24 ಕೋಟಿ ಲಾಭ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2023, 14:31 IST
Last Updated 15 ಆಗಸ್ಟ್ 2023, 14:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ (ಪಿಟಿಐ): ಕೆಫೆ ಕಾಫಿ ಡೇ (ಸಿಸಿಡಿ) ಮಳಿಗೆಗಳನ್ನು ನಡೆಸುವ ಕಾಫಿ ಡೇ ಗ್ಲೋಬಲ್ ಲಿಮಿಟೆಡ್‌ (ಸಿಡಿಜಿಎಲ್) ಕಂಪನಿಯು ಜೂನ್‌ ತ್ರೈಮಾಸಿಕದಲ್ಲಿ ₹24.57 ಕೋಟಿ ಲಾಭ ಗಳಿಸಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಂಪನಿಯು ₹11.73 ಕೋಟಿ ನಷ್ಟ ಅನುಭವಿಸಿತ್ತು. ಕಂಪನಿಯ ಕಾರ್ಯಾಚರಣೆ ವರಮಾನವು ಹಿಂದಿನ ವರ್ಷದ ಜೂನ್ ತ್ರೈಮಾಸಿಕದಲ್ಲಿ ₹189.63 ಕೋಟಿ ಇದ್ದಿದ್ದು ಈ ವರ್ಷದ ಜೂನ್ ತ್ರೈಮಾಸಿಕದಲ್ಲಿ ₹223.20 ಕೋಟಿಗೆ ಏರಿಕೆ ಆಗಿದೆ.

ಸಿಡಿಜಿಎಲ್‌ ಕಂಪನಿಯು ಷೇರುಪೇಟೆಯಲ್ಲಿ ನೋಂದಾಯಿತ ಆಗಿಲ್ಲ. ಆದರೆ ಅದರ ಮಾತೃಸಂಸ್ಥೆಯಾಗಿರುವ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್ (ಸಿಡಿಇಎಲ್) ಈ ವಿವರಗಳನ್ನು ಷೇರುಪೇಟೆಗೆ ಸಲ್ಲಿಸುತ್ತದೆ.

ADVERTISEMENT

ಕಂಪನಿಯು ಹೊಂದಿರುವ ಸಿಸಿಡಿ ಮಳಿಗೆಗಳ ಸಂಖ್ಯೆಯು 467ಕ್ಕೆ ತಗ್ಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಂಪನಿಯು 493 ಮಳಿಗೆಗಳನ್ನು ಹೊಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.