ADVERTISEMENT

ಕ್ಯಾಮ್ಲಿನ್ ಪೆನ್ಸಿಲ್, ಪೆನ್, ಕಂಪಾಸ್ ಹರಿಕಾರ ಸುಭಾಷ್ ದಾಂಡೇಕರ್ ಇನ್ನಿಲ್ಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜುಲೈ 2024, 6:05 IST
Last Updated 16 ಜುಲೈ 2024, 6:05 IST
<div class="paragraphs"><p>ಸುಭಾಷ್ ದಾಂಡೇಕರ್</p></div>

ಸುಭಾಷ್ ದಾಂಡೇಕರ್

   

ನವದೆಹಲಿ: ಸ್ಟೇಷನರಿ ಬ್ರ್ಯಾಂಡ್ ಕ್ಯಾಮ್ಲಿನ್ ಸಂಸ್ಥಾಪಕ ಸುಭಾಷ್ ದಾಂಡೇಕರ್ (86) ಅವರು ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಜನಪ್ರಿಯ ಕಲಾಕೃತಿ ಬ್ರ್ಯಾಂಡ್ ಅನ್ನು ಜಪಾನ್‌ನ ಕೊಕುಯೊಗೆ ಮಾರಾಟ ಮಾಡಿದ ಬಳಿಕ ದಾಂಡೇಕರ್ ಕೊಕುಯೊ ಕ್ಯಾಮ್ಲಿನ್‌ನ ಗೌರವಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ADVERTISEMENT

ಸುಭಾಷ್ ದಾಂಡೇಕರ್ ಅವರ ಪತ್ನಿ ಎರಡು ವರ್ಷಗಳ ಹಿಂದೆ ನಿಧನರಾಗಿದ್ದರು. ಪುತ್ರ ಹಾಗೂ ಪುತ್ರಿಯನ್ನು ದಾಂಡೇಕರ್ ಅಗಲಿದ್ದಾರೆ.

ದಾಂಡೇಕರ್ ಅವರ ಅಂತ್ಯಕ್ರಿಯೆಯನ್ನು ಮುಂಬೈಯಲ್ಲಿ ನಡೆಸಲಾಗಿದ್ದು, ಗುರುವಾರ ಸಂತಾಪ ಸಭೆ ಹಮ್ಮಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.

90ರ ದಶಕದಲ್ಲಿ ಕ್ಯಾಮ್ಲಿನ್ ಪೆನ್ಸಿಲ್, ಪೆನ್, ಕಂಪಾಸ್ ಸೇರಿದಂತೆ ಜಾಮಿಟ್ರಿ ಬಾಕ್ಸ್ ಹೆಚ್ಚಿನ ಜನಪ್ರಿಯತೆ ಗಳಿಸಿತ್ತು. ಎರಡು-ಮೂರು ದಶಕಗಳಿಂದ ಕ್ಯಾಮ್ಲಿನ್ ಕಂಪಾಸ್ ಮತ್ತು ಪೆನ್, ಪೆನ್ಸಿಲ್ ಬ್ರಾಂಡ್ ಶಾಲಾ ಮಕ್ಕಳಲ್ಲಿ ಜನಪ್ರಿಯ ವಸ್ತುವಾಗಿ ಉಳಿದಿತ್ತು.

ದಾಂಡೇಕರ್ ನಿಧನಕ್ಕೆ ರಾಜಕೀಯ ಮುಖಂಡರು ಸೇರಿದಂತೆ ಉದ್ಯಮಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.