ADVERTISEMENT

ಏರ್ ಇಂಡಿಯಾ ಸಿಇಒ ಆಗಿ ವಿಲ್ಸನ್

ಪಿಟಿಐ
Published 12 ಮೇ 2022, 18:20 IST
Last Updated 12 ಮೇ 2022, 18:20 IST

ಮುಂಬೈ: ಏರ್‌ ಇಂಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಆಗಿ ಕ್ಯಾಂಪ್‌ಬೆಲ್ ವಿಲ್ಸನ್ ಅವರನ್ನು ನೇಮಕ ಮಾಡುತ್ತಿರುವುದಾಗಿ ಟಾಟಾ ಸನ್ಸ್ ಹೇಳಿದೆ.

ವಿಲ್ಸನ್ ಅವರು ಈಗ ಸಿಂಗಪುರ ಏರ್‌ಲೈನ್ಸ್ ಕಂಪನಿಯ ಅಂಗಸಂಸ್ಥೆಯಾಗಿರುವ ಸ್ಕೂಟ್‌ ಏರ್‌ನ ಸಿಇಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಿಂಗಪುರ ಏರ್‌ಲೈನ್ಸ್ ಕಂಪನಿಯು ಟಾಟಾ ಸಮೂಹದ ‘ವಿಸ್ತಾರಾ’ ವಿಮಾನಯಾನ ಕಂಪನಿಯಲ್ಲಿ ಪಾಲುದಾರ ಕೂಡ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT