ADVERTISEMENT

ಕೆನರಾ ಬ್ಯಾಂಕ್‌ ಸಾಲದ ಮೇಲಿನ ಬಡ್ಡಿದರ ಇಳಿಕೆ

ಪಿಟಿಐ
Published 6 ಜೂನ್ 2020, 18:32 IST
Last Updated 6 ಜೂನ್ 2020, 18:32 IST

ನವದೆಹಲಿ: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ ರೆಪೊ ದರಕ್ಕೆ ಸಂಪರ್ಕಿಸಿರುವ ಸಾಲಗಳ ಮೇಲಿನ ಬಡ್ಡಿದರವನ್ನು ಶೇ 0.40ರಷ್ಟು ಇಳಿಕೆ ಮಾಡಿದ್ದು, ಗ್ರಾಹಕರಿಗೆ ನೀಡಿಕೆ ದರ ಶೇ 6.90ಕ್ಕೆ ತಲುಪಿದೆ.

ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (ಎಂಸಿಎಲ್‌ಆರ್‌) ಆಧಾರಿತ ಸಾಲದ ಬಡ್ಡಿ ದರದಲ್ಲಿಯೂ ಶೇ 0.20ರಷ್ಟು ಕಡಿಮೆ ಮಾಡಿದೆ. ಪರಿಷ್ಕೃತ ಬಡ್ಡಿದರಗಳು ಭಾನುವಾರದಿಂದಲೇ ಅನ್ವಯಿಸಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT