ADVERTISEMENT

ಕೆನರಾ ಬ್ಯಾಂಕ್‌: ಆನ್‌ಲೈನ್‌ನಲ್ಲಿ ವಿಮೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 17:04 IST
Last Updated 29 ಏಪ್ರಿಲ್ 2019, 17:04 IST
ಆನ್‌ಲೈನ್‌ನಲ್ಲಿ ವಿಮೆ ಉತ್ಪನ್ನ ಖರೀದಿಸುವ ಸೌಲಭ್ಯಕ್ಕೆ ಚಾಲನೆ ನೀಡಿದ ಸಮಾರಂಭದಲ್ಲಿ ಕೆನರಾ ಬ್ಯಾಂಕ್‌ನ ಸಿಇಒ ಆರ್‌. ಎ. ಶಂಕರ್‌ ನಾರಾಯಣನ್‌ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರು ಭಾಗವಹಿಸಿದ್ದರು
ಆನ್‌ಲೈನ್‌ನಲ್ಲಿ ವಿಮೆ ಉತ್ಪನ್ನ ಖರೀದಿಸುವ ಸೌಲಭ್ಯಕ್ಕೆ ಚಾಲನೆ ನೀಡಿದ ಸಮಾರಂಭದಲ್ಲಿ ಕೆನರಾ ಬ್ಯಾಂಕ್‌ನ ಸಿಇಒ ಆರ್‌. ಎ. ಶಂಕರ್‌ ನಾರಾಯಣನ್‌ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರು ಭಾಗವಹಿಸಿದ್ದರು   

ಬೆಂಗಳೂರು: ಕೆನರಾ ಬ್ಯಾಂಕ್‌, ಕೆನರಾ ಎಚ್‌ಎಸ್‌ಬಿಸಿ ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ ಲೈಫ್‌ ಇನ್ಶೂರೆನ್ಸ್‌ ಕಂಪನಿಯ ಸಹಯೋಗದಲ್ಲಿ ಇಂಟರ್‌ನೆಟ್‌ನಲ್ಲಿ ಜೀವ ವಿಮೆ ಉತ್ಪನ್ನಗಳ ಖರೀದಿ ಸೌಲಭ್ಯಕ್ಕೆ ಚಾಲನೆ ನೀಡಿದೆ.

ತಂತ್ರಜ್ಞಾನ ವ್ಯಾಮೋಹಿ ಗ್ರಾಹಕರು ಇನ್ನು ಮುಂದೆ ಜೀವ ವಿಮೆ ಪಾಲಿಸಿ ಖರೀದಿಸಲು ಬ್ಯಾಂಕ್‌ ಶಾಖೆಗೆ ಭೇಟಿ ಕೊಡುವ ಅಗತ್ಯ ಇರುವುದಿಲ್ಲ. ಕೆನರಾ ಬ್ಯಾಂಕ್‌ನ ಇಂಟರ್‌ನೆಟ್‌ ತಾಣದಿಂದಲೇ ನೇರವಾಗಿ ಖರೀದಿಸಬಹುದು.

‘ಅನೇಕ ಗ್ರಾಹಕರು ತಮ್ಮೆಲ್ಲ ಬ್ಯಾಂಕಿಂಗ್‌ ವಹಿವಾಟಿನ ಅಗತ್ಯಗಳಿಗೆ ಇಂಟರ್‌ನೆಟ್‌ ನೆಚ್ಚಿಕೊಂಡಿದ್ದಾರೆ. ಕೆನರಾ ಎಚ್‌ಎಸ್‌ಬಿಸಿ ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ ಲೈಫ್‌ ಇನ್ಶೂರೆನ್ಸ್‌ ಕಂಪನಿಯ ವಿಮೆ ಉತ್ಪನ್ನಗಳನ್ನು ಇನ್ನು ಮುಂದೆ ಆನ್‌ಲೈನ್‌ನಲ್ಲಿ ಸುಲಭವಾಗಿ ಖರೀದಿಸಬಹುದಾಗಿದೆ. ಈ ಒಪ್ಪಂದದಿಂದ ಎಲ್ಲ ಭಾಗಿದಾರರಿಗೆ ಪ್ರಯೋಜನ ದೊರೆಯಲಿದೆ’ ಎಂದು ಕೆನರಾ ಬ್ಯಾಂಕ್‌ನ ಸಿಇಒ ಆರ್‌. ಎ. ಶಂಕರ್‌ ನಾರಾಯಣನ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.