ಬೆಂಗಳೂರು: ಕೆನರಾ ಬ್ಯಾಂಕ್‌ನ ಸಂಪೂರ್ಣ ಒಡೆತನಕ್ಕೆ ಒಳಪಟ್ಟಿರುವ ಕೆನರಾ ಬ್ಯಾಂಕ್ ಸೆಕ್ಯುರಿಟೀಸ್ ಲಿಮಿಟೆಡ್, ಆನ್‌ಲೈನ್ ಇನ್‌ಸ್ಟಾ ಡಿಮ್ಯಾಟ್ ಖಾತೆ ಸೌಲಭ್ಯಕ್ಕೆ ಚಾಲನೆ ನೀಡಿದೆ.
ಬ್ಯಾಂಕ್‌ನ ಗ್ರಾಹಕರಿಗೆ ಅನುಕೂಲತೆ ಒದಗಿಸುವ ಉದ್ದೇಶದಿಂದ ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರೀಸ್ ಲಿಮಿಟೆಡ್‌ನ (ಎನ್‌ಎಸ್‌ಡಿಎಲ್) ಸಹಯೋಗದಲ್ಲಿ ಈ ಸೌಲಭ್ಯ ಆರಂಭಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಪೈಕಿ ಈ ಸೌಲಭ್ಯ ಆರಂಭಿಸಿದ ಮೊದಲ ಬ್ಯಾಂಕ್ ಇದಾಗಿದೆ.
‘ಎನ್‌ಎಸ್‌ಡಿಎಲ್’ನ ಈ ಇನ್‌ಸ್ಟಾ ಡಿಮ್ಯಾಟ್ ಖಾತೆ ಸೌಲಭ್ಯವನ್ನು ಗ್ರಾಹಕರು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮತ್ತು ಹೊಸ ನಿಧಿ ಕೊಡುಗೆಗೆ (ಎನ್‌ಎಫ್‌ಒ) ಅರ್ಜಿ ಸಲ್ಲಿಸುವುದೂ ಸೇರಿದಂತೆ ವಿವಿಧ ಉದ್ದೇಶಗಳಿಗೆ ಬಳಸಬಹುದು.
ಗ್ರಾಹಕರು ತಮ್ಮ ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯದ ಮೂಲಕ ಈ ಖಾತೆ ತೆರೆಯಬಹುದು. ಒಂದು ನಿಮಿಷದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.