ADVERTISEMENT

ಕೆನರಾ ಬ್ಯಾಂಕ್‌ ಬಡ್ಡಿದರ ಕಡಿತ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 20:00 IST
Last Updated 6 ಏಪ್ರಿಲ್ 2020, 20:00 IST

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌, ರೆಪೊ ದರ ಆಧರಿಸಿರುವ ಸಾಲಗಳ ಮೇಲಿನ ಬಡ್ಡಿದರದಲ್ಲಿ (ಆರ್‌ಎಲ್‌ಎಲ್‌ಆರ್) ಶೇ 0.75ರಷ್ಟು ಕಡಿಮೆ ಮಾಡಿದೆ. ಮಂಗಳವಾರದಿಂದ ಶೇ 7.30ರಬಡ್ಡಿದರದಲ್ಲಿ ಸಾಲ ಸಿಗಲಿದೆ.

ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (ಎಂಸಿಎಲ್‌ಆರ್‌) ಆಧಾರಿತ ಸಾಲದ ಬಡ್ಡಿ ದರದಲ್ಲಿಯೂ ಶೇ 0.35ರವರೆಗೂ ಇಳಿಕೆ ಮಾಡಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ರೆಪೊ ದರವನ್ನು ಶೇ 0.75ರಷ್ಟು ಕಡಿಮೆ ಮಾಡಿರುವುದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಕೆನರಾ ಬ್ಯಾಂಕ್‌ ಈ ನಿರ್ಧಾರ ತೆಗೆದುಕೊಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.